ಗೋಡೆ ಹಾಳಾಗಿ ಪೇಂಟ್ ಮಾಡಿಸದೇ ಇದ್ದವರಿಗೆ, ಒಂದೇ ರೀತಿ ಮನೆ ನೋಡಿ ಸಾಕು ಎನಿಸಿದವರಿಗೆ ಈ ವಿಷಯ ಇಷ್ಟವಾಗಬಹುದು.. ಗೋಡೆ ಮೇಲೆ ಪ್ರತಿ ಬಾರಿಯೂ ಪೇಂಟ್ ಮಾಡಿಸಲೇಬೇಕು ಎಂದೇನಿಲ್ಲ. ಅದರ ಬದಲು ವಾಲ್ಪೇಪರ್ ಅಥವಾ ವಾಲ್ ಸ್ಟಿಕ್ಕರ್ಗಳನ್ನು ಹಾಕಬಹುದು. ಇವು ಕೂಡ ಹತ್ತು ವರ್ಷ ಬಾಳಿಕೆ ಬರುತ್ತವೆ. ಬೋರಾದ ನಂತರ ಮತ್ತೆ ಬೇರೆ ರೀತಿ ಟ್ರೈ ಮಾಡಬಹುದು. ಇದರಿಂದ ಮನೆ ವಿಭಿನ್ನವಾಗಿ ಕಾಣುತ್ತದೆ. ಯಾವ ಯಾವ ರೀತಿ ವಾಲ್ಪೇಪರ್ ಹಾಕಬಹುದು ನೋಡೋಣ..
ಹೂವುಗಳ ಸ್ಟಿಕ್ಕರ್: ನೀವು ನೇಚರ್ ಪ್ರೇಮಿಯಾಗಿದ್ದರೆ ಹೂವು ಎಲೆಗಳ ಸ್ಟಿಕ್ಕರ್ ಹಾಕಬಹುದು. ಒಂದು ಗೋಡೆ ಪೂರ್ತಿ ಈ ರೀತಿ ಮಾಡಿ ಉಳಿದ ಗೋಡೆಗಳನ್ನು ಪ್ಲೇನ್ ಬಿಳಿ ಬಣ್ಣದಲ್ಲಿ ಬಿಟ್ಟರೆ ಗೋಡೆ ಚೆನ್ನಾಗಿ ಕಾಣುತ್ತದೆ. ಹಾಗೂ ಫ್ಲೋರಲ್ ಡಿಸೈನ್ ಚೆನ್ನಾಗಿಯೂ ಕಾಣುತ್ತದೆ.
ದೇವರ ಸ್ಟಿಕ್ಕರ್ಸ್: ದೇವರ ಮನೆ ಮೇಲೆ ಖಾಲಿ ಗೋಡೆ ಭಾಗದಲ್ಲಿ ದೇವರ ವಾಲ್ ಸ್ಟಿಕ್ಕರ್ ಹಾಕಿದರೆ ಚೆನ್ನಾಗಿ ಕಾಣುತ್ತದೆ. ಎಲ್ಲೆಡೆಯೂ ದೇವರೇ ಕಂಡಂತೆಯೂ ಆಗುತ್ತದೆ.
ಟ್ರಾವೆಲಿಂಗ್ ಸ್ಟಿಕ್ಕರ್ಸ್: ನೀವು ಟ್ರಾವೆಲ್ಲಿಂಗ್ ಪ್ರಿಯರಾಗಿದ್ದರೆ ಈ ಸ್ಟಿಕ್ಕರ್ಗಳು ನಿಮಗಾಗಿಯೇ ಎನ್ನುವಂತೆ ಇರುತ್ತವೆ. ಇದನ್ನು ನಿಮ್ಮ ರೂಮಿಗೆ ಹಾಕಿಕೊಳ್ಳಬಹುದು.
ಪದಗಳ ಸ್ಟಿಕ್ಕರ್: ಪಾಸಿಟಿವ್ ಥಾಟ್ಸ್ ಇರುವಂಥ ಸ್ಟಿಕ್ಕರ್ಗಳನ್ನು ಸಹ ಬಳಸಬಹುದು. ಇದನ್ನು ನೋಡುತ್ತಾ ನಿಮ್ಮಲ್ಲಿಯೇ ಒಂದು ಸಕಾರಾತ್ಮಕ ಶಕ್ತಿ ಹುಟ್ಟಿಕೊಳ್ಳುತ್ತದೆ. ಹಾಲ್, ಬೆಡ್ರೂಂ ಅಥವಾ ಗೆಸ್ಟ್ ರೂಂ ಎಲ್ಲಿಯಾದರೂ ಇದನ್ನು ಹಾಕಬಹುದು.
ಕಿಚನ್ ಸ್ಟಿಕ್ಕರ್ಸ್: ಕಿಚನ್ಗೆ ಸಂಬಂಧಪಟ್ಟ ವಿಷಯಗಳ ಸ್ಟಿಕ್ಕರ್ ಕೂಡ ಸಿಗುತ್ತದೆ. ಅಡುಗೆ ಮನೆ ಮಾಮೂಲಿಗಿಂತ ವಿಶೇಷವಾಗಿ ಕಾಣುತ್ತದೆ. ಹಾಗೂ ನಿಮಗೆ ಅಡುಗೆ ಮಾಡಲು ಒಂದು ರೀತಿ ಖುಷಿ ಇರುತ್ತದೆ.
ಮಕ್ಕಳ ಸ್ಟಿಕ್ಕರ್ಸ್: ಮಕ್ಕಳ ಕೈಗೆ ಸಿಗದ ಹೈಟ್ನಲ್ಲಿಮಕ್ಕಳ ಸ್ಟಿಕ್ಕರ್ಸ್ ಹಾಕಬಹುದು, ಪ್ರಾಣಿ ಪಕ್ಷಿ ಕಾರ್ಟೂನ್ ಹೀಗೆ ಅವರಿಷ್ಟದ ಸ್ಟಿಕ್ಕರ್ ಹಾಕಬಹುದು.
ಸ್ವಿಚ್ಗಳ ಮೇಲೆ: ಸ್ವಿಚ್ಗಳ ಮೇಲೆಯೂ ಇಂಟರೆಸ್ಟಿಂಗ್ ಆದ ಸ್ಟಿಕ್ಕರ್ಗಳನ್ನು ಹಾಕಬಹುದು. ಪ್ರಾಣಿಗಳು ಅಥವಾ ಯಾವುದಾದರೂ ಆರ್ಟ್ ಕುರಿತ ಸ್ಟಿಕ್ಕರ್ ಚೆನ್ನಾಗಿ ಕಾಣುತ್ತದೆ.
ಹಳೇ ಬೀರು: ಹಳೇ ಬೀರೂ ಅಥವಾ ಕಬೋರ್ಡ್ ಬೇಸರ ತರಿಸಿದ್ದರೆ ಅದಕ್ಕೆ ಸ್ಟಿಕ್ಕರ್ ಹಚ್ಚಿ ಹೊಸ ರೂಪ ನೀಡಬಹುದು. ಹಚ್ಚುವಾಗ ಸ್ವಲ್ಪ ಜಾಗರೂಕರಾಗಿ ಹಚ್ಚಬೇಕು ಅಥವಾ ಎಕ್ಸ್ಪರ್ಟ್ ಬಳಿ ಹಚ್ಚಿಸಿ.