Thursday, July 7, 2022

Latest Posts

ಗೋಣಿಕೊಪ್ಪ ಎಪಿಎಂಸಿಗೆ ಪ್ರವೀಣ್ ಮುತ್ತಪ್ಪ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಗೋಣಿಕೊಪ್ಪ: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಎ. ಪ್ರವೀಣ್ ಮುತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಬಿ ಸುಶೀಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
ತಾಲೂಕು ದಂಡಾಧಿಕಾರಿ ನಂದೀಶ್ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಿದರು.
ಎರಡು ಸ್ಥಾನಕ್ಕೂ ಯಾವುದೇ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು.
ಈ ಹಿಂದೆ ಪಕ್ಷದಲ್ಲಿ ಆದ ಒಡಂಬಡಿಕೆಯಂತೆ ನಿರ್ಗಮಿತ ಅಧ್ಯಕ್ಷ ಎನ್ ಸುಜಾ ಪೂಣಚ್ಚ ಉಪಾಧ್ಯಕ್ಷ ಸಿ ಸುಬ್ರಮಣಿ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭ ಭಾಜಪ ತಾಲೂಕು ಮಂಡಲ ಅಧ್ಯಕ್ಷ ನೆಲ್ಲೀರ ಚಲನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ, ಸದಸ್ಯರಾದ ಕಿಲನ್, ಸುವಿನ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss