ಗೋಣಿಕೊಪ್ಪ: ಟಿಪ್ಪರ್ ಡಿಕ್ಕಿಯಾಗಿ ಪೊಲೀಸ್ ಪೇದೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಇಲ್ಲಿನ ನಗರ ಠಾಣೆಯ ಮೂರ್ತಿ ಗಾಯಗೊಂಡ ಪೊಲೀಸ್ ಪೇದೆ. ಪಟ್ಟಣದ ಸೀಗೆತೋಡು ಸಮೀಪ ಖಾಲಿ ಟಿಪ್ಪರ್ ಲಾರಿಯೊಂದು ಚಾಲಕನ ನಿರ್ಲಕ್ಷದಿಂದ ಪೊಲೀಸ್ ಪೇದೆ ಪ್ರಯಾಣಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದು, ಬೈಕ್ನ ಮುಂಭಾಗದ ಚಕ್ರ ಬೇರ್ಪಟ್ಟಿದೆ. ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.