ಗೋಣಿಕೊಪ್ಪ: ಬಾಳೆಲೆ ಸಮೀಪದ ಕೊಟ್ಟಗೇರಿ ಗ್ರಾಮದಲ್ಲಿ ಹುಲಿ ದಾಳಿಗೆ ಕರು ಬಲಿಯಾಗಿರುವ ಘಟನೆ ನಡೆದಿದೆ.
ಗ್ರಾಮದ ನಿವಾಸಿ ಆರಮಣಮಾಡ ವಿನು ಸೋಮಯ್ಯ ಅವರ ದನದ ಕೊಟ್ಟಿಗೆಗೆ ರಾತ್ರಿ 9.30ರ ಸುಮಾರಿಗೆ ಬಂದ ಹುಲಿಯು ಕರುವನ್ನು ಹಿಡಿದು ಕೊಂದಿದ್ದು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ತಾಲೂಕು ಬಿಜೆಪಿ ಕೃಷಿ ಮೋರ್ಚಾ ನಿರ್ದೇಶಕ ಕಾಟಿಮಾಡ ಶರೀನ್ ಮುತ್ತಣ್ಣ, ಆರ್ಎಂಸಿ ಸದಸ್ಯ ಮಾಚಂಗಡ ಸುಜಾ ಪೂಣಚ್ಚ, ಪ್ರಮುಖರಾದ ಸೋಮಯ್ಯ, ಮೇಚಂಡ ವಿಬಿನ್ ಗಾಂಧಿ, ಪಟ್ಟಡ ಬೋಪಯ್ಯ, ಮುಂತಾದವರು ವಲಯ ಅರಣ್ಯಾಧಿಕಾರಿ ಗಿರೀಶ್ ಚೌಗುಲೆ ಅವರೊಂದಿಗೆ ಸೂಕ್ತ ಪರಿಹಾರ ನೀಡುವುದರೊಂದಿಗೆ ಹುಲಿ ಉಪಟಳ ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.