Thursday, July 7, 2022

Latest Posts

ಗೋಣಿಕೊಪ್ಪ| ಬೀಟೆ ನಾಟಾ ಅಕ್ರಮ ಸಾಗಾಟ: ಲಾರಿ ಸಹಿತ ವ್ಯಕ್ತಿ ಸೆರೆ

ಗೋಣಿಕೊಪ್ಪ: ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಶುಕ್ರವಾರ ರಾತ್ರಿ ಆನೆಚೌಕೂರು ಅರಣ್ಯ ಇಲಾಖೆ ತಪಾಸಣಾ ಗೇಟ್ ಬಳಿ ಸಿಬ್ಬಂದಿಗಳು ಬಂಧಿಸಿದ್ದಾರೆ.
ವೀರಾಜಪೇಟೆ ತಾಲೂಕು ಕಡಂಗ ಗ್ರಾಮದ ಅಬ್ದುಲ್ ಕಲಾಂ(32) ಬಂಧಿತ ವ್ಯಕ್ತಿ.
ಶುಕ್ರವಾರ ರಾತ್ರಿ ಎಂದಿನಂತೆ ತಪಾಸಣಾ ಗೇಟ್ ಬಳಿ ವಾಹನಗಳನ್ನು ಪರೀಕ್ಷಿಸುವ ಸಂದರ್ಭ ಹುಣಸೂರು ಕಡೆಗೆ ಹೊರಟಿದ್ದ ಮಿನಿ ಲಾರಿ ಕೆಎಲ್13 ಎಫ್313ನ್ನು ಪರೀಕ್ಷಿಸುವ ಸಂಧರ್ಭ ಬಾಳೆಗೊನೆಗಳ ಅಡಿಯಲ್ಲಿ 16 ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಸಿಬ್ಬಂದಿಗಳು ವಾಹನ ಹಾಗೂ ಬೀಟೆ ಮರದ ನಾಟಾಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್ ಎಫ್ ಓ ಕಿರಣ್ ಕುಮಾರ್, ಡಿವೈ ಆರ್ ಎಫ್ ಓ ರಂಜನ್, ಅರಣ್ಯ ರಕ್ಷಕರಾದ ಅಯ್ಯಪ್ಪ, ದುರ್ಗಪ್ಪ, ರವಿ ಮತ್ತು ವಾಹನ ಚಾಲಕ ಸೆಲ್ಲೆಂನ್ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss