Wednesday, July 6, 2022

Latest Posts

ಗೋಣಿಕೊಪ್ಪ| ಲಾಕ್‌ಡೌನ್ ನಿರ್ಬಂಧವನ್ನು ಸಡಿಲಗೊಳಿಸಿದ್ದರೂ ಕರ್ಫ್ಯೂ ಮಾದರಿ ಪರಿಸ್ಥಿತಿ

ಗೋಣಿಕೊಪ್ಪ: ಕೊಡಗಿನಲ್ಲಿ 41 ದಿನಗಳ ನಂತರ ಲಾಕ್‌ಡೌನ್ ನಿರ್ಬಂಧವನ್ನು ಸಡಿಲಗೊಳಿಸಿದ್ದರೂ, ಪಟ್ಟಣದಲ್ಲ್ಲಿ ಕರ್ಫ್ಯೂ ಮಾದರಿ ಪರಿಸ್ಥಿತಿ ಮುಂದುವರಿದಿದೆ.
ಮಾ. ೨೨ರಂದು ಕೊರೋನಾ ವೈರಾಣು ವಿರುದ್ಧ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ದಿನಸಿಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸಮಯ ಹಾಗೂ ದಿನವನ್ನು ನಿಗದಿಪಡಿಸಿ ಬೇರೆ ವ್ಯಾಪಾರ ವಹಿವಾಟಿಗೆ ಕಡಿವಾಣ ಹಾಕಿತ್ತು.
ಜಿಲ್ಲೆಯಲ್ಲಿ ಕೊರೋನಾ ಒಂದು ಪ್ರಕರಣ ಮಾತ್ರ ವರದಿಯಾಗಿ ನಂತರ ಆ ವ್ಯಕ್ತಿ ಗುಣಮುಖರಾಗಿರುವುದಾಗಿ ಆರೋಗ್ಯ ಇಲಾಖೆ ದೃಢಪಡಿಸಿತ್ತು.
ಇದೀಗ 41 ದಿನಗಳ ನಂತರ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪ್ರಕರಣ ವರದಿಯಾಗದ ಕಾರಣ ಎಲ್ಲಾ ವ್ಯವಹಾರಗಳಿಗೆ ಸಮಯ ನಿಗದಿಪಡಿಸಿ ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ಪಟ್ಟಣದ ಬಟ್ಟೆ, ಮೊಬೈಲ್ ಶಾಪ್, ಬೇಕರಿ ,ಔಷಧಿ ಮಳಿಗೆಗಳು ತರಕಾರಿ ಅಂಗಡಿಗಳಲ್ಲಿ ಖರೀದಿದಾರರು ಇಲ್ಲದೆ ಬಿಕೋ ಎನ್ನುತ್ತಿವೆ. ಸಾರ್ವಜನಿಕರ ಪ್ರಕಾರ ಹಿಂದಿನಂತೆ ಬೆಳಗ್ಗೆ ೬ ಗಂಟೆಯಿಂದ ಮಧ್ಯಾಹ್ನ೧೨ ಗಂಟೆವರೆಗಿನ ಸಮಯಕ್ಕೆ ಹೊಂದಿಕೊಂಡಿದ್ದು, ಮತ್ತೆ ಹೊಸ ವ್ಯವಸ್ಥೆಗೆ ಬರಲು ಕಾಲಾವಕಾಶ ಬೇಕಾಗಿದೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss