ಮುಂದಿನ ತಿಂಗಳು ೨ರಂದು ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ. ಇವರ ಹುಟ್ಟುಹಬ್ಬದಂದು ‘ಸಖತ್’ ಸಿನಿಮಾ ತಂಡ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಪ್ಲಾನ್ ಹಾಕಿಕೊಂಡಿದೆ. ಆ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲಿದ್ದಾರೆ.ಗಣೇಶ್ ನಟಿಸುತ್ತಿರುವ ‘ಸಖತ್’ ಸಿನಿಮಾಗೆ ನಿರ್ದೇಶಕ ಸುನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ‘ಚಮಕ್’ ಎಂಬ ಹಿಟ್ ಚಿತ್ರ ಕೊಟ್ಟಿದ್ದ ಈ ತಂಡ ಎರಡನೇ ಬಾರಿಗೆ ಒಂದಾಗಿದೆ. ಕೆವಿಎನ್ ಮತ್ತು ಸುಪ್ರೀತ್ ಪ್ರೊಡಕ್ಷನ್ಬ್ಯಾನರ್ನಡಿಯಲ್ಲಿ ಈ ಚಿತ್ರ ಮೂಡಿ ಬರಲಿದೆ.ಗಣೇಶ್ ಜೊತೆಗೆ ನಾಯಕಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ಸುರಭಿ ನಟಿಸಲಿದ್ದಾರೆ. ಆ ಮೂಲಕ ಸ್ಯಾಂಡಲ್ವುಡ್ಗೆ ಮೊದಲ ಬಾರಿ ಕಾಲಿಡುತ್ತಿದ್ದಾರೆ. ಸಾಧು ಕೋಕಿಲ, ಕುರಿ ಪ್ರತಾಪ್, ರಘುರಾಮ್, ಗಿರಿ, ಧರ್ಮಣ್ಣ ಸೇರಿದಂತೆ ಅನೇಕ ಕಲಾವಿದರ ಬಳಗ ಈ ಸಿನಿಮಾದಲ್ಲಿದೆ.