ನವದೆಹಲಿ: ನಟಿ ಪೂನಂ ಪಾಂಡೆ ಪತಿ ಸ್ಯಾಮ್ರನ್ನು ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ.
ಪತಿ ಸ್ಯಾಮ್ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೂನಂ ಪಾಂಡೆ ಪೊಲೀಸರಿಗೆ ದೂರು ನೀಡಿದ್ದು, ತನ್ನ ಮೇಲೆ ಹಲ್ಲೆಯಾಗಿದೆ ಹಾಗೂ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ನೀಡಿದ್ದರು.
ಈ ಸಂಬಂಧ ಪತಿ ಸ್ಯಾಮ್ರನ್ನು ಬಂಧಿಸಲಾಗಿದೆ ಎಂದು ಕೆನಕೋಡಾ ಪೊಲೀಸ್ ಠಾಣೆ ಇನ್ಸಪೆಕ್ಟರ್ ತುಕಾರಾಂ ಚವ್ಹಾಣ್ ಹೇಳಿದ್ದಾರೆ.
ಸದ್ಯ ದಕ್ಷಿಣ ಗೋವಾದ ಕೆನಕೋವಾ ಗ್ರಾಮದಲ್ಲಿ ಬಂಧಿಸಿದ್ದು, ಪೂನಂ ಅಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದರು ಎನ್ನಲಾಗಿದೆ. ಮದುವೆಯಾಗಿ ಕೇವಲ 13ದಿನಕ್ಕೇ ಈ ವಿಚಾರ ಹೊರಬಂದಿದೆ ಎನ್ನಲಾಗಿದೆ.