ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗೋವಾ ಜನರಿಗೆ ಸರ್ಕಾರದಿಂದ ಗುಡ್ ನ್ಯೂಸ್: ‘ರೇಷನ್ ಕಾರ್ಡ್’ ಹೊಂದಿದವರಿಗೆ ರೂ.32ರ ಸಬ್ಸಿಡಿ ದರದಲ್ಲಿ ‘ಈರುಳ್ಳಿ’!

ಪಣಜಿ: ಈರುಳ್ಳಿ ಬೆಲೆ ಗಗನಕ್ಕೆ ಏರಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಇದೀಗ ಗೋವಾ ಜನರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರೇಷನ್ ಕಾರ್ಡ್ ಹೊಂದಿರುವಂತ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಈರುಳ್ಳಿ ವಿತರಣೆಗೆ ಮುಂದಾಗಿದೆ.
ಗೋವಾ ಸರ್ಕಾರ ರಾಜ್ಯದಲ್ಲಿರುವಂತಹ 3.5 ಲಕ್ಷ ಪಡಿತರ ಚೀಟಿದಾರರಿಗೆ ಪ್ರತಿ ಕೆಜಿ ಈರುಳ್ಳಿಯನ್ನು, ರೂ.32ರ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. ಅಲ್ಲದೇ ಹೀಗೆ ವಿತರಣೆಗಾಗಿ ಮಹಾರಾಷ್ಟ್ರದ ನಾಸಿಕ್ ನಿಂದ 1,045 ಮೆಟ್ರಿಕ್ ಟನ್ ಈರುಳ್ಳಿಯನ್ನು ಸಹ ಗೋವಾ ಸರ್ಕಾರ ಖರೀದಿಸಿದೆ.
ಈ ಕುರಿತಂತೆ ಮಾಹಿತಿ ನೀಡಿದ ಗೋವಾ ನಾಗರೀಕ ಪೂರೈಕೆ ಇಲಾಖೆಯ ನಿರ್ದೇಶಕ ಸಿದ್ಧಿವಿನಾಯಕ ನಾಯಕ್ , ಕಳೆದ ಬುಧವಾರದಂದು ನಡೆದಂತ ಸಚಿವ ಸಂಪುಟ ಸಭೆಯಲ್ಲಿ ರೇಷನ್ ಕಾರ್ಡ್ ಕುಟುಂಬಗಳಿಗೆ 32 ರೂಪಾಯಿ ಸಬ್ಸಿಡಿ ದರದಲ್ಲಿ ಈರುಳ್ಳಿ ವಿತರಣೆಗೆ 1045 ಮೆಟ್ರಿಕ್ ಟನ್ ಈರುಳ್ಳಿ ಖರೀದಿಸಲು ಅನುಮೋದಿಸಲಾಗಿದೆ. ರಾಜ್ಯ 3.5 ಲಕ್ಷ ರೇಷನ್ ಕಾರ್ಡ್ ದಾರರಿಗೆ ಕೆಜಿಗೆ 32 ರೂ ದರದಲ್ಲಿ 3 ಕೆಜಿ ಈರುಳ್ಳಿಯನ್ನು ವಿತರಿಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss