Tuesday, June 28, 2022

Latest Posts

ಗೋವಿನ ವಿಚಾರದಲ್ಲಿ ಇತಿಹಾಸ ಮರೆತ ಕಾಂಗ್ರೆಸ್ಸಿಗರು: ಸಿ.ಟಿ.ರವಿ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಗೋವಿನ ವಿಚಾರದಲ್ಲಿ ಕಾಂಗ್ರೆಸ್ಸಿಗರು ಇತಿಹಾಸ ಮರೆತಿದ್ದಾರೆ. ಈಗಿರುವ ಕಾಂಗ್ರೆಸ್‍ಗೂ ಹಿಂದಿನ ಕಾಂಗ್ರೆಸ್‍ಗೂ ಯಾವ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.
ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದು ಪಡಿಸಬೇಕು ಎಂದು ಕಾಂಗ್ರೆಸಿಗರು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೋಡೆತ್ತು, ಹಸು, ಕರು ಅವರ ಪಕ್ಷದ ಗುರುತಾಗಿತ್ತು ಈಗಿನ ಕಾಂಗ್ರೆಸಿಗರಿಗೆ ಅದು ಗೊತ್ತಿಲ್ಲ. ಯಾವ ಪಕ್ಷ ಜೋಡೆತ್ತು, ಹಸು-ಕರುವನ್ನು ತನ್ನ ಪಕ್ಷದ ಗುರುತಾಗಿಟ್ಟುಕೊಂಡಿತ್ತೋ ಆ ಪಕ್ಷ ಗೋಹತ್ಯೆ ನಿಷೇಧವನ್ನು ಸಮರ್ಥನೆ ಮಾಡಿತು ಎಂದು ಆರೋಪಿಸಿದರು.
ಆಹಾರ ಸಂಸ್ಕೃತಿ ಯ ಬಗ್ಗೆ ಕಾಂಗ್ರೆಸಿಗರು ಮಾತನಾಡುತ್ತಾರೆ. ಇದಿ ಅಮೀನನಿಗೆ ಮನುಷ್ಯರನ್ನು ತಿನ್ನುವುದೇ ಆಹಾರ. ನಾಳೆ ಮನುಷ್ಯರೇ ನಮ್ಮ ಆಹಾರ ಎಂದರೆ ಅಂಥವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಸುತ್ತಾರಾ? ಎಂದು ಪ್ರಶ್ನಿಸಿದರು.
ದೇಶದಲ್ಲಿ ಒಂದು ಸಂಸ್ಕೃತಿ ಇದೆ. ಸಿದ್ದರಾಮಯ್ಯ ಅವರ ಕುಲದೇವರಾದ ಬೀರೇಶ್ವರ ಯಾವತ್ತಾದರೂ ಗೋಹತ್ಯೆಗೆ ಸಮರ್ಥನೆಗೆ ನಿಲ್ಲುತ್ತಾರಾ? ಬೀರೇಶ್ವರನ ವಾಹನ ಏನು ಎನ್ನುವುದರ ಬಗ್ಗೆ ಅವರು ವಿಚಾರ ಮಾಡಲಿ. ಆಗ ಅವರ ಮೂಲ ಸಂಸ್ಕೃತಿ ಯಾವುದು? ಓಟಿಗಾಗಿ ಹಿಡಿದುಕೊಂಡಿರುವ ವಿಚಾರ ಯಾವುದು ಎನ್ನುವುದು ಗೊತ್ತಾಗುತ್ತದೆ ಎಂದರು.
ಸಂವಿಧಾನದ ಬಗ್ಗೆ ಯಾರಿಗೆ ಶ್ರದ್ಧೆ, ತಿಳಿವಳಿಕೆ ಇರುವವರು ಅವರು ಯಾರೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧ ಮಾಡುವುದಿಲ್ಲ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರೇ ಸಂವಿಧಾನದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಪ್ರಸ್ತಾಪಿಸಿದ್ದಾರೆ. 1964 ರಲ್ಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಆ ಕಾಯ್ದೆಯನ್ನು ಇನ್ನಷ್ಟು ಬಲಪಡಿಸುವ ಕೆಲಸವನ್ನಷ್ಟೇ ಈಗ ಮಾಡಲಾಗಿದೆ. 1964ರಲ್ಲಿ ಜನಸಂಘವಾಗಲಿ, ಬಿಜೆಪಿಯಾಗಲಿ ಅ„ಕಾರದಲ್ಲಿರಲಿಲ್ಲ. 1950-51 ರಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬರುವ ಸಂದರ್ಭ ಡಾ.ಅಂಬೇಡ್ಕರ್ ಅವರಿಗೆ ಅವರಿಗೆ ಸಲಹೆ ಕೊಟ್ಟಿರುವುದು ಬಿಜೆಪಿಯಲ್ಲ, ಮೋದಿಯವರಲ್ಲ. ಈ ದೇಶದ ಸಂಸ್ಕೃತಿ ಅವರ ಮನಸಿಗೆ ಬರುವಂತೆ ಮಾಡಿ ಸಂವಿಧಾನದಲ್ಲಿ ಉಲ್ಲೇಖ ಮಾಡುವಂತೆ ಮಾಡಿತು. ಈ ದೇಶದಲ್ಲಿ ಇರುವುದು ಪುರಾತನವಾದ ಸಂಸ್ಕೃತಿ . ಗೋವನ್ನು ಬರೀ ಪೂಜ್ಯ ಭಾವನೆ ಮಾತ್ರವಲ್ಲ. ಅದು ಎಲ್ಲ ರೀತಿಯಿಂದಲೇ ದೇಶಕ್ಕೆ ಬಲಕೊಟ್ಟಂತಹ ಸಂಕೇತ. ಗೋವಿನ ಜತೆಗೆ ಜೀವನ ಎಂದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss