Friday, March 5, 2021

Latest Posts

ಗೋವು ಕಳ್ಳರಿಂದಾಗಿ ಖಾಲಿಯಾಗಿದ್ದ ಹಟ್ಟಿ: ಸಂತ್ರಸ್ತ ಮಹಿಳೆಯ ಜೀವನಕ್ಕೆ ಆಧಾರವಾದ ಯುವಕರು

ಹೊಸ ದಿಗಂತ ವರದಿ, ಕುಂದಾಪುರ:

  • ರಕ್ಷಿತ್ ಬೆಳಪು

ಇವರೆಲ್ಲ ಯಾವ ತಾಯಿ ಹೆತ್ತ ಮಕ್ಕಳೋ ಗೊತ್ತಿಲ್ಲ… ಆದರೆ ಕಷ್ಟ ಎಂದು ದುಃಖಿಸುವವರ ಸಹಾಯಕ್ಕೆ ಧಾವಿಸುವ ಇವರೆಲ್ಲರೂ ಉಳ್ತೂರಿನ ಸಮಾನ ಮನಸ್ಕ ಯುವಕರು.

ಕುಂದಾಪುರ ತಾಲೂಕಿನ ಉಳ್ತೂರಿನ ಯುವಕರು ಊರಿನಲ್ಲಿ ಸಂಕಷ್ಟದಲ್ಲಿರುವ ಸುಮಿತ್ರಾ ಆಚಾರ್ಯ ಅವರ ಮಕ್ಕಳ ಸ್ಥಾನದಲ್ಲಿ ನಿಂತು ಅವರಿಗೆ ಸಹಾಯ ಮಾಡುತ್ತಿದ್ದಾರೆ.

ಕಳೆದ ಒಂದೂವರೆ ವರ್ಷದ ಹಿಂದೆ ಗೋ ಕಳ್ಳರು ಉಳ್ತೂರು ಗ್ರಾಮದ ಸುಮಿತ್ರಾ ಆಚಾರ್ಯರ ಕೊಟ್ಟಿಗೆ ಯಲ್ಲಿದ್ದ ಗಬ್ಬದ ಹಸುವನ್ನು ಕದ್ದಿದ್ದರು. ಇದುವರೆಗೂ ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಖಾಕಿ ಪಡೆಗಳು ವಿಫಲವಾಗಿದೆ.

ಬಡತನದಲ್ಲಿಯೇ ಜೀವನ ನಡೆಸುತ್ತಿದ್ದ ಸುಮಿತ್ರಾ ಅವರು ಹಸುವಿನ ಹಾಲನ್ನು ಮಾರಿ ಜೀವನ ನಡೆಸುತ್ತಿ ದ್ದರು. ಸದ್ಯ ಮನೆ ನಡೆಸುವುದು ಕಷ್ಟವಾಗಿರುವ ಅವರಿಗೆ ಉಳ್ತೂರಿನ ಯುವಕರೆಲ್ಲ ಸೇರಿ ಹಸುವೊಂದನ್ನು ನೀಡಲು ನಿರ್ಧರಿಸಿದ್ದಾರೆ. ಫೆ.15ಕ್ಕೆ ಉಳ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸುಮಿತ್ರಾ ಅವರ ಖಾಲಿ ಕೊಟ್ಟಿಗೆಗೆ ಗೋ ಮಾತೆಯನ್ನು ನೀಡಿ ಜೀವನ ನಿರ್ವಹಣೆಗೆ ಹೊಸ ದಾರಿ ಮಾಡಿಕೊಡುತ್ತಿದ್ದಾರೆ.

ದೇವ್ರು ಚೆನ್ನಾಗಿಡಲಿ…
ಹಸುವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದೆ. ಆದರೆ ಯಾರೋ ದನವನ್ನು ಕದ್ದುಕೊಂಡು ಹೋದರು. ದನವು ಸಿಗಲಿಲ್ಲ. ಕದ್ದವರು ಪತ್ತೆಯಾಗಲಿಲ್ಲ. ಈಗ ಊರಿನ ಮಕ್ಕಳ್ ಎಲ್ಲ ಸೇರಿ ಒಂದು ದನ ಕೊಡ್ತಾ ಇದ್ರು. ದೇವ್ರು ಅವರನ್ನು ನೂರು ಕಾಲ ಚೆನ್ನಾಗಿ ಇಡಲಿ ಎಂದು ಹರಸುತ್ತಾರೆ ಸಂತ್ರಸ್ತೆ ಸುಮಿತ್ರಾ ಆಚಾರ್ಯ.

ಕಷ್ಟದಲ್ಲಿದ್ದರು…
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ಇನ್ನಾದರೂ ಗೋ ಕಳ್ಳರ ಅಟ್ಟಹಾಸವನ್ನು ಖಾಕಿ ಪಡೆ ಹೆಡೆಮುರಿ ಕಟ್ಟಬೇಕಿದೆ. ಸುಮಿತ್ರಾ ಆಚಾರ್ಯ ಅವರು ಮನೆಯಲ್ಲಿದ್ದ ದನದಿಂದ ಹಾಲು ಮಾರಿ ಜೀವನ ಸಾಗಿಸುತ್ತಿದ್ದರು. ಈಗ ದನ ಇಲ್ಲದೇ ಬದುಕು ಕಷ್ಟವಾಗಿದೆ. ನಾವೆಲ್ಲಾ ತರುಣರ ತಂಡ ಸೇರಿಕೊಂಡು ಅವರಿಗೊಂದು ದನ ನೀಡುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸ್ಥಳೀಯರಾದ ಅವಿನಾಶ್ ಉಳ್ತೂರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss