ಹೊಸ ದಿಗಂತ ವರದಿ, ಮಡಿಕೇರಿ:
ಮ್ಯಾಕ್ಸಿಮೋ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ಕು ಗೋವುಗಳನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಬಳಿ ಶೇಕ್ ಉಸ್ಮಾನ್ ಮಾಲಕತ್ವದ ತನ್ವೀರ್ ಎಂಬಾತ ಚಾಲನೆ ಮಾಡುತ್ತಿದ್ದ ಕೆಎ- 12 – ಬಿ 4625 ಮ್ಯಾಕ್ಸಿಮೋ ಗೂಡ್ಸ್ ವಾಹನದಲ್ಲಿ 4 ಗೋವುಗಳನ್ನು ಗೋಮಾಂಸ ಮಾಡುವ ದುರುದ್ದೇಶದಿಂದ ಹತ್ಯೆಗಾಗಿ ಸಾಗಿಸುತ್ತಿತಗತೆನ್ನಲಾಗಿದೆ.
ಈ ಸಂದರ್ಭ ಧಾಳಿ ನಡೆಸಿದ ಹಿಂದು ಜಾಗರಣ ವೇದಿಕೆಯ ಅಮ್ಮತ್ತಿ ವಲಯ ಕಾರ್ಯಕರ್ತರ ತಂಡ ವಾಹನ ಸಮೇತ ಆರೋಪಿಯನ್ನು ಸೆರೆ ಹಿಡಿದು ಪೋಲೀಸರ ವಶಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ. ರಕ್ಷಣೆ ಮಾಡಿರುವ ಗೋವುಗಳನ್ನು ಅಮ್ಮತ್ತಿಯ ಕಾಮಧೇನು ಗೋಶಾಲೆಯ ಸ್ವಾಧೀನಕ್ಕೆ ನೀಡಲಾಗಿದೆ.
ಆರೋಪಿಯನ್ನು ಬಂಧಿಸಿರುವ ವೀರಾಜಪೇಟೆ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ