ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ..ಈ ಸಾಲುಗಳನ್ನು ನೀವೆಲ್ಲರೂ ಕೇಳಿದ್ದೀರಾ. ಗೋವಿನಿಂದ ಸಿಗುವ ಪ್ರತಿಯೊಂದು ಮನುಷ್ಯನಿಗೆ ಉಪಯೋಗಕ್ಕೆ ಬರುವಂತಹದ್ದೆ ಆಗಿದೆ. ಹಾಲು, ಸಗಣಿ, ಮೂತ್ರ ಎಲ್ಲವೂ ನಮಗೆ ಅತ್ಯಮೂಲ್ಯವಾದದ್ದೇ ಆಗಿದೆ.ಅದರಲ್ಲೂ ಗೋ ಮೂತ್ರ ಸಾವಿರಾರೂ ರೋಗಗಳಿಗೆ ದಿವ್ಯ ಔಷಧಿ. ಇದರಲ್ಲಿ ಪೊಟ್ಯಾಷಿಯಂ, ಕ್ಯಾಲ್ಸಿಯಂ, ಕ್ಲೋರೈಡ್, ಯೂರಿಯಾ, ಅಮೋನಿಯಾ, ಸಲ್ಫರ್, ಯೂರಿಕ್ ಆ್ಯಸಿಡ್, ಫಾಸ್ಫೇಟ್, ಮ್ಯಾಂಗನೀಸ್, ಕಾರ್ಬೋಲಿಕ್ ಆ್ಯಸಿಡ್ ನಂತಹ ಖನಿಜ ಲವಣಗಳಿವೆ. ಅಷ್ಟೇ ಅಲ್ಲದೇ ವಿಟಮಿನ್ ಅಂಶಗಳೂ ಇದೆ ಎಂದು ವೈಜ್ಞಾನಿಕವಾಗಿ ಪತ್ತೆಯಾಗಿದೆ.
- ಲಿವರ್ ತೊಂದರೆಗಳಿದ್ದರೆ ಗೋ ಮೂತ್ರವನ್ನು ಪ್ರತಿ ದಿನ ಮೂರು ಚಮಚ ಸೇವಿಸಿದರೂ ಸಾಕು ತಿಂಗಳೊಳಗಾಗಿ ಲಿವರ್ ಸಮಸ್ಯೆ ಸರಿಯಾಗಿತ್ತದೆ.
- ಗೋ ಮೂತ್ರದಲ್ಲಿ ದೌವಿಕ ಶಕ್ತಿಯ ಗುಣವಿದ್ದು ಇದನ್ನು ಸೇವಿಸಿದರೆ ದುಷ್ಟ ಶಕ್ತಿ ನಿಮ್ಮ ಸಮೀಪ ಬರದಂತೆ ತಡೆಯುತ್ತದೆ.
- ವಿಪರೀತ ಹಲ್ಲು ನೋವು ಇದ್ದಾಗ ಗೋ ಮೂತ್ರಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿಕೊಂಡು ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ಕಡಿಮೆ ಆಗುತ್ತದೆ. ಹಲ್ಲಿನಲ್ಲಿರುವ ಕೀಟಾಣುಗಳನ್ನು ನಾಶಮಾಡುವ ಶಕ್ತಿ ಗೋ ಮೂತ್ರಕ್ಕಿದೆ.
- ಕೂದಲಿನಲ್ಲಿ ಹೊಟ್ಟು ಅತಿಯಾದಾಗ ಗೋ ಮೂತ್ರವನ್ನು ಮೊಸರಿನಲ್ಲಿ ಹಾಕಿ ಬೆರೆಸಿಕೊಂಡು ಕೂದಲಿಗೆ ಹಚ್ವಿ ಮಸಾಜ್ ಮಾಡಿಕೊಳ್ಳಬೇಕು. ಇದನ್ನು ಹಚ್ಚಿಕೊಂಡು ಎರಡು ತಾಸು ಹಾಗೆಯೇ ಬಿಡಬೇಕು. ನಂತರ ತಲೆ ಸ್ನಾನ ಮಾಡಿ. ಹೀಗೆ ವಾರದಲ್ಲಿ ಎರಡು ಸಲಿ ಮಾಡಿದರೂ ಸಾಕು. ತಲೆ ಹೊಟ್ಟು ನಿವಾರಣೆಯಾಗುತ್ತದೆ.
- ಚಿಕ್ಕ ಮಕ್ಕಳಿಗೆ ಹಾಲೊಂದನ್ನೇ ಕುಡಿದು ನಾಲಿಗೆ ಬಿಳಿಯಾಗಿರುತ್ತದೆ. ಮತ್ತು ನಾಲಿಗೆ ದಪ್ಪವಾಗಿರುತ್ತದೆ. ನಾಲಿಗೆ ದಪ್ಪವಾದರೆ ಅವರು ಮಾತನಾಡಲು ಪ್ರಯತ್ನಿಸುವಲ್ಲಿ ಹಿಂದೇಟು ಹಾಕುತ್ತಾರೆ. ಹಾಗಾಗಿ ವಾರಕ್ಕೆ ಒಮ್ಮೆ ಮಕ್ಕಳಿಗೆ ಒಂದು ಚಮಚ ಗೋ ಮೂತ್ರ ಕುಡಿಸಿ. ಮತ್ತು ಒಂದು ಬಟ್ಟೆಯನ್ನು ಗೋ ಮೂತ್ರದಲ್ಲಿ ಅದ್ದಿ ಅವರ ನಾಲಿಗೆಗೆ ತಿಕ್ಕಿ. ಇದರಿಂದ ನಾಲಿಗೆ ತೆಳ್ಳಗಾಗುತ್ತದೆ. ಮತ್ತು ನಾಲಿಗೆ ಬಿಳಿ ಆಗಿರುವುದು ಹೋಗುತ್ತದೆ.
- ಜಂತು ಹುಳಗಳು ಹೆಚ್ಚಾದಾಗ ಹೊಟ್ಟೆ ಕಡಿತ ಬರುತ್ತದೆ, ಕೂದಲು ಉದರುತ್ತದೆ. ಅಂಥ ಸಂದರ್ಭದಲ್ಲಿ ಗೋ ಮೂತ್ರ ಸೇವನೆ ಮಾಡಬೇಕು ಇದರಿಂದ ಬೇಗ ಹೊಟ್ಟೆ ಕಡಿತ ಕಡಿಮೆ ಆಗುತ್ತದೆ. ಗೋ ಮೂತ್ರದಲ್ಲಿ ನಮ್ಮ ದೇಹದಲ್ಲಿ ಪರಜೀವಿಗಳು ವಾಸಿಸುವುದನ್ನು ಕಡಿಮೆ ಮಾಡುವ ಶಕ್ತಿ ಇದೆ.
- ವಾತ, ಪಿತ್ತ, ಸಂಧಿವಾತ, ಸಂಧಿನೋವು,ಹೊಟ್ಟೆನೋವು, ತಲೆನೋವು ಇಂತಹ ಅನೇಕ ಆರೋಗ್ಯಕರ ತೊಂದರೆಗೆ ಗೋ ಮೂತ್ರವನ್ನು ಸೇವನೆ ಮಾಡಿದರೆ ಎಲ್ಲವೂ ಪರಿಹಾರವಾಗುತ್ತದೆ.
- ಇತ್ತೀಚೆಗೆ ಕ್ಯಾನ್ಸರ್ ರೋಗವನ್ನು ತಡೆಯುವ ಶಕ್ತಿ ಗೋ ಮೊತ್ರಕ್ಕಿದೆ ಎಂದು ಚೀನಾ ವೈದ್ಯಕೀಯ ಕ್ಷೇತ್ರ ಸಂಶೋಧನೆ ಮಾಡಿದೆ. ಅಷ್ಟೇ ಅಲ್ಲದೇ ಗೋ ಮೂತ್ರವನ್ನು ಇಲಿಗಳಿಗೆ ಕುಡಿಸಿ ಇದರಿಂದ ಹೃದಯ ಸಂಬಂಧಿ ರೋಗ ಕಡಿಮೆ ಆಗುವುದನ್ನು ಕಂಡುಹಿಡಿದಿದ್ದಾರೆ.
- ಗೋ ಮೂತ್ರಕ್ಕೆ ರಕ್ತ ಶುದ್ಧಿ ಮಾಡುವ ಗುಣವಿರುವುದರಿಂದ ಇದನ್ನು ಕುಡಿದರೆ ಅದು ರಕ್ತ ಶುದ್ಧವಾಗಿ ಇಡುತ್ತದೆ. ಸಕ್ಕರೆ ಕಾಯಿಲೆ ನಿಯಂತ್ರಣ ಮಾಡುತ್ತದೆ.
ಹಳ್ಳಿಮನೆಗಳಲ್ಲಿ ಹಸುಗಳು ಇರುವುದರಿಂದ ಗೋ ಮೂತ್ರ ಬೇಕಾದಾಗ ಸಿಗುತ್ತದೆ. ಆದರೆ ಪೇಟೆಗಳಲ್ಲಿ ಸಿಗುವುದು ಕಷ್ಟ, ಅಂತಹ ಸಂದರ್ಭದಲ್ಲಿ ಆಯುರ್ವೇದಿಕ್ ಔಷಧಿ ಅಂಗಡಿಗಳಲ್ಲಿ ಗೋ ಮೂತ್ರದ ಬಾಟಲ್ ಸಿಗುತ್ತದೆ. ಅದನ್ನು ಇಟ್ಟುಕೊಂಡಿರಿ. ನಿಮಗೆ ಬೇಕಾದಾಗ ಉಪಯೋಗಿಸಿಕೊಳ್ಳಿ. ಸಾವಿರ ರೋಗಳನ್ನು ತಡೆಯು ದಿವ್ಯ ಔಷಧಿ ಇದು.