Sunday, July 3, 2022

Latest Posts

ಗೋ ಹತ್ಯೆ ನಿಷೇಧ ಸ್ವಾಗತಾರ್ಹ: ಸಿ.ಎಂ. ಇಬ್ರಾಹಿಂ

ಹೊಸದಿಗಂತ ವರದಿ,ಹುಬ್ಬಳ್ಳಿ:

ರಾಜ್ಯ ಸರಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿದ್ದು ಸ್ವಾಗತಾರ್ಹ. ಗೋ ಹತ್ಯೆ ನಿಷೇಧಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಮುಸ್ಲಿಮರು ಯಾರೂ ಗೋ ಮಾಂಸ ತಿನ್ನಬಾರದು. ನಾನು ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಜೆಯಾದ, ವಯಸ್ಸಾದ ಹಾಗೂ ಅನಾರೋಗ್ಯ ಪೀಡಿತ ಗೋವುಗಳ ಉಪಚಾರ ಮಾಡಲು ಪ್ರತಿ ಪಂಚಾಯತಿಗೆ ಒಂದೊಂದು ಗೋಶಾಲೆಯನ್ನು ತೆರೆಯಬೇಕು. ಆ ಮೂಲಕ ಗೋ ಸಾಕಾಣಿಕೆಗೆ ಸರಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಅನ್ಯ ಸಮುದಾಯದ ಹುಡುಗ-ಹುಡುಗಿಯನ್ನು ಒತ್ತಾಯ ಪೂರ್ವಕವಾಗಿ ಮದುವೆ ಮಾಡಿದರೆ ಬೇಕಾದರೇ ಕ್ರಮ ಕೈಗೊಳ್ಳಲಿ. ಹುಡುಗ, ಹುಡುಗಿ ಅವರ ಇಚ್ಛೆಯಂತೆ ಮದುವೆಯಾದರೆ ಯಾರೂ ಏನು ಮಾಡಲು ಬರುವುದಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss