ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಹೊಸ ಗೌಪ್ಯತಾ ನಿಯಮಗಳ ಹೊಸ ನವೀಕರಣವನ್ನು ವಾಟ್ಸ್ಆ್ಯಪ್ ಮೇ 15ಕ್ಕೆ ಮುಂದೂಡಿರುವುದಾಗಿ ತಿಳಿಸಿದೆ.
400 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಆ್ಯಪ್, ಭಾರತದಲ್ಲಿ ಅತಿದೊಡ್ಡ ಮಾರುಕಟ್ಟೆ ಪಡೆದಿದೆ. ಆದರೆ ಕಳೆದ ಕೆಲ ದಿನಗಳಿಂದ ಬಳೆಕೆದಾರರ ಕೆಂಗಣ್ಣಿಗೆ ಗುರಿಯಾಗಿದ್ದ ವಾಟ್ಸ್ಆ್ಯಪ್ ಇದೀಗ ಹೊಸ ನವೀಕರಣವನ್ನು ಮುಂದೂಡಿರುವುದಾಗಿ ತಿಳಿಸಿದೆ.
ಈ ಕುರಿತು ವಾಟ್ಸ್ಆ್ಯಪ್ ತನ್ನ ನಿಯಮಗಳನ್ನು ಪರಿಶೀಲನೆ ಮತ್ತು ನವೀಕರಿಸುವಂತೆ ಬಳಕೆದಾರರಿಗೆ ಕೇಳುವ ದಿನಾಂಕವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದೆ ಎಂದು ಬ್ಲಾಗ್ ಪೋಸ್ಟ್ನಲ್ಲಿ ಹೇಳಿದೆ.
ಫೆಬ್ರವರಿ 8 ರಂದು ಯಾರ ಖಾತೆಯನ್ನೂ ಅಮಾನತುಗೊಳಿಸುವುದಿಲ್ಲ ಮತ್ತು ಅಳಿಸುವುದಿಲ್ಲ. ವಾಟ್ಸ್ಆ್ಯಪ್ನಲ್ಲಿ ಗೌಪ್ಯತೆ ಮತ್ತು ಸುರಕ್ಷತೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗೆಗಿನ ತಪ್ಪು ಮಾಹಿತಿ ತೆಗೆದುಹಾಕಲು ನಾವು ಇನ್ನೂ ಹೆಚ್ಚಿನದನ್ನು ಮಾಡಲಿದ್ದೇವೆ. ಈ ನಂತರ ಪಾಲಿಸಿ ಪರಿಶೀಲಿಸಲು ಕ್ರಮೇಣ ಜನರ ಬಳಿಗೆ ಹೋಗುತ್ತೇವೆ. ಮೇ 15ರಂದು ಹೊಸ ವ್ಯವಹಾರ ಆಯ್ಕೆಗಳು ಲಭ್ಯವಾಗಲಿವೆ. ಅಂದು ಆ್ಯಪ್ ಅನ್ನು ಅಪ್ಡೇಟ್ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.
ಇನ್ನು ನಮ್ಮ ಇತ್ತೀಚಿನ ಅಪ್ಡೇಟ್ನಲ್ಲಿ ಎಷ್ಟು ಗೊಂದಲಗಳಿವೆ ಎಂಬುದನ್ನು ನಾವು ಅನೇಕ ಜನರಿಂದ ಕೇಳಿದ್ದೇವೆ. ಸಾಕಷ್ಟು ತಪ್ಪು ಮಾಹಿತಿಗಳು ಕಳವಳ ಉಂಟುಮಾಡಿದೆ. ನಮ್ಮ ಪಾಲಿಸಿ ಮತ್ತು ನಿಜಾಂಶ ಅರ್ಥಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ಸಹಾಯ ಮಾಡಲು ನಾವು ಬಯಸುತ್ತೇವೆ ಎಂದು ವಾಟ್ಸ್ಆ್ಯಪ್ ಹೇಳಿದೆ.