Tuesday, July 5, 2022

Latest Posts

ಗೌರಿಬಿದನೂರು| ಹೆಣ್ಣು ಮಗು ಹುಟ್ಟಿತೆಂದು ದೇವಾಲಯದ ಬಳಿ ಎಸೆದು ಹೋದರು…

ಚಿಕ್ಕಬಳ್ಳಾಪುರ: ಹೆಣ್ಣು ಮಗು ಎಂಬ ಕಾರಣಕ್ಕೆ ದೇವಾಲಯದ ಬಳಿ ಬಿಸಾಡಿ ಹೋದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ರಾಮಾಪುರದಲ್ಲಿ ನಡೆದಿದೆ.
ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಾಪುರ ಗ್ರಾಮದ ಬಳಿಯ ನದಿ ಪಾತ್ರದಲ್ಲಿರುವ ಅಕ್ಕಮ್ಮ ದೇವಾಲಯದ ಬಳಿ ಮಗುವನ್ನು ಎಸೆದು ಹೋಗಿದ್ದಾರೆ. ಹೆಣ್ಣು ಮಗು ಎಂಬ ಕಾರಣಕ್ಕೆ ಹೆತ್ತ ತಾಯಿ ಅಥವ ಅವರ ಕುಟುಂಬದವರು ಎಸೆದು ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಗು ಅಳುತ್ತಿರುವುದನ್ನು ಕೇಳಿಸಿಕೊಂಡ ಕುರಿ ಕಾಯುವ ಮಂದಿ ಮಗವನ್ನು ರಕ್ಷಿಸಿ ಆರೋಗ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಆಶಾ ಕಾರ್ಯಕರ್ತೆ ಮಗುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಮಗುವಿಗೆ ಉಸಿರಾಟದ ತೊಂದರೆಯಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಗುವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿಸಲಾಗಿದೆ ಎಂದು ವೈದ್ಯ ರವಿಕುಮಾರ್ ತಿಳಿಸಿದರು. ಹೆಣ್ಣುಮಗುವನ್ನು ಪೋಷಕರು ಬಾರವಾಗಿ ಭಾವಿಸಬಾರದೆಂದು ಹೆಣ್ಣು ಮಗು ಹುಟ್ಟಿದರೆ ಸರ್ಕಾರ ಹಲವು ರೀತಿಯ ಯೋಜನೆಗಳನ್ನು ನೀಡುವುದರ ಮೂಲಕ ಪ್ರೋತ್ಸಾಹ ನೀಡುತ್ತಲೇ ಇದೆ. ಆದರೂ ಹೆಣ್ಣು ಮಗುವನ್ನು ಈಗಲೂ ತಿರಸ್ಕೃತ ಭಾವನೆಯಿಂದ ನೋಡುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಜಿಲ್ಲಾಡಳಿತ, ಕಾನೂನು ಪ್ರಾಧಿಕಾರ ಜಿಲ್ಲೆಯಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಇಂತಹ ಅಮಾನವೀಯ ಘಟನೆಗಳು ಮರುಕಳಿಸುತ್ತಿರುವುದು ದುರದೃಷ್ಟಕರವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss