ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿನ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸೇರಿದ ಪ್ರಮುಖ ಆರೋಪಿ ರಿಷಿಕೇಷ್ ದೇವಾಡಿಕರ್ ಎಂಬಾತನನ್ನು ಪೊಲೀಸ್ ಬಂಧಿಸಿದ್ದಾರೆ.
ರಿಷಿಕೇಷ್ ಜಾರ್ಕಂಡ್ ಮೂಲದವನಾಗಿದ್ದು ಎಸ್.ಐ.ಟಿ. ತಂಡ ಆತನನ್ನು ಜಾರ್ಕಂಡ್ ನಲ್ಲಿ ಬಂಧಿಸಿ ತಮ್ಮ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಪ್ರಕರಣದಲ್ಲಿ ಶಂಕಿತ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಈಗ ಆ ತಂಡದ ಪ್ರಮುಖ ವ್ಯಕ್ತಿಯನ್ನು ಹಿಡಿದು ಈ ಪ್ರಕರಣಕ್ಕೆ ಪೊಲೀಸರು ತಿರುವು ತಂದಿದ್ದಾರೆ.