ಚೆನ್ನೈ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ,ಖ್ಯಾತ ನಟರಾದ ಸುದೀಪ್, ಪ್ರಕಾಶ್ ರೈ, ರಾಣಾ, ನಟಿ ತಮನ್ನಾಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ.
ಆನ್ ಲೈನ್ ಜೂಜಾಟದಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಗ್ಯಾಂಬ್ಲಿಂಗ್ ಅನ್ನು ಉತ್ತೇಜಿಸುತ್ತಿರುವ ಜಾಹಿರಾತುಗಳಲ್ಲಿ ನಟಿಸಿರುವ ಕಾರಣ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದ್ದು ನವೆಂಬರ್ 19ರೊಳಗೆ ಉತ್ತರಿಸುವಂತೆ ಸೂಚಿಸಿದೆ. ನ್ಯಾಯಮೂರ್ತಿಗಳಾದ ಎನ್.ಕಿರುಬಕರನ್ ಮತ್ತು ಬಿ.ಪುಗಲೇಂಡಿ ಅವರನ್ನೊಳಗೊಂಡ ಪೀಠವು ನೋಟಿಸ್ ಜಾರಿ ಮಾಡಿದೆ.
ಆತ್ಮಹತ್ಯೆಗೆ ಆನ್ಲೈನ್ ಗ್ಯಾಂಬ್ಲಿಂಗ್ ಕಾರಣವಾಗುತ್ತಿದೆ. ಗ್ಯಾಂಬ್ಲಿಂಗ್ ಗೆ ಸಮಾಜದ ಪ್ರಮುಖರ ಪ್ರಚಾರ ಸರಿಯಲ್ಲ ಎಂದು ಪಿಟಿಷನ್ ಆಧಾರದಲ್ಲಿ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.
‘ಐಪಿಎಲ್ ತಂಡಗಳ ಹೆಸರಿನಲ್ಲಿರುವ ಈ ಆಪ್ ಗಳು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ), ರಾಜಸ್ಥಾನ್ ರಾಯಲ್ಸ್ (ಆರ್ ಆರ್) ಮತ್ತು ಕೆಲವು ಆಪ್ʼಗಳು ರಾಜ್ಯದ ಹೆಸರಲ್ಲೇ ಇವೆ. ಈ ತಂಡಗಳು ರಾಜ್ಯದ ಪರವಾಗಿ ಆಡುತ್ತಿವೆಯೇ,’ ಎಂದು ನ್ಯಾಯಪೀಠ ಪ್ರಶ್ನಿಸಿತು.
ಈ ಆಪ್ ಗಳ ಮಾಲೀಕರು ಕೋಟ್ಯಂತರ ರೂಪಾಯಿ ಗಳಿಕೆಗಾಗಿ ಸೆಲೆಬ್ರಿಟಿಗಳನ್ನ ಬಳಸಿಕೊಳ್ಳುತ್ತಿದ್ದಾರೆ ಎಂದು ಪೀಠ ಆರೋಪಿಸಿದೆ. ನವೆಂಬರ್ 19ರೊಳಗೆ ಈ ನೋಟಿಸ್ʼಗೆ ಉತ್ತರಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.