ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಬೆಳ್ಳುಳ್ಳಿ ಮೊಸರು ಬಜ್ಜಿ ಸೇವಿಸಿ! ಬೆಳ್ಳುಳ್ಳಿ ಮೊಸರು ಬಜ್ಜಿ ಮಾಡುವುದು ಹೀಗೆ…

ಬೆಳ್ಳುಳ್ಳಿ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ನಿತ್ಯ ಒಂದು ಬೆಳ್ಳುಳ್ಳಿ ಸೇವಿಸಿದರೆ ಅನೇಕ ರೋಗಗಳಿಂದ ಬಚಾವ್ ಆಗಬಹುದು. ಆದರೆ ಎಲ್ಲರಿಗೂ ಬೆಳ್ಳುಳ್ಳಿಯನ್ನು ನೇರವಾಗಿ ತಿನ್ನುವುದಕ್ಕೆ ಆಗುವುದಿಲ್ಲ. ಅಂತವರು ಬೆಳ್ಳುಳ್ಳಿ ಮೊಸರು ಬಜ್ಜಿ ಮಾಡಿಕೊಂಡು ಅನ್ನದ ಜೊತೆ ಸೇವಿಸಿ. ಇದು ಅನ್ನದ ಜೊತೆ ಬಹಳ ರುಚಿಯಾಗಿರುತ್ತದೆ. ಬೆಳ್ಳುಳ್ಳಿ ಮೊಸರು ಬಜ್ಜಿ ಮಾಡುವುದು ಹೀಗೆ..

ಬೇಕಾಗುವ ಪದಾರ್ಥ:
ಮೊಸರು
ಸಕ್ಕರೆ
ಉಪ್ಪು

ಒಗ್ಗರಣೆ ಸಾಮಗ್ರಿ:
ಎಣ್ಣೆ
ಬೆಳ್ಳುಳ್ಳಿ
ಸಾಸಿವೆ
ಕರಿ ಬೇವಿನಸೊಪ್ಪು
ಉದ್ದಿನ ಬೇಳೆ
ಇಂಗು
ಒಣ ಮೆಣಸು
ಹಸಿ ಮೆಣಸು

ಮಾಡುವ ವಿಧಾನ:

  • ಮೊದಲಿಗೆ ಮೊಸರಿಗೆ ಉಪ್ಪು, ಮತ್ತು ಒಂದು ಚಮಚ ಸಕ್ಕರೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.
  • ಆನಂತರ ಎಣ್ಣೆ, ಕರಿ ಬೇವು, ಬೆಳ್ಳುಳ್ಳಿ, ಹಸಿ ಮೆಣಸು, ಒಣ ಮೆಣಸು, ಸಾಸಿವೆ, ಉದ್ದಿನ ಬೇಳೆ, ಇಂಗು ಹಾಕಿ ಒಗ್ಗರಣೆ ರೆಡಿ ಮಾಡಿಕೊಂಡು ಮೊಸರಿಗೆ ಹಾಕಿದರೆ ಬೆಳ್ಳುಳ್ಳಿ ಮೊಸರು ಬಜ್ಜಿ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss