Sunday, January 24, 2021

Latest Posts

ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಪಲ್ಟಿ: ತಪ್ಪಿದ ಅನಾಹುತ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬೆಂಗಳೂರಿನ ವರ್ತೂರು ಸೇತುವೆ ಬಳಿ ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಲಾರಿಯಲ್ಲಿ ಇಂಡೇನ್​ ಗ್ಯಾಸ್​ ಸಿಲಿಂಡರ್​ಗಳನ್ನ ಕೊಂಡೊಯ್ಯಲಾಗ್ತಿತ್ತು. ಈ ವೇಳೆ ಲಾರಿಯ ಸ್ಟೇರಿಂಗ್​ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ವರ್ತೂರು ಸೇತುವೆಯ ಗೋಡೆಗೆ ಲಾರಿ ಡಿಕ್ಕಿ ಹೊಡೆದು, ನಂತರ ಸಂಪೂರ್ಣ ಪಲ್ಟಿಯಾಗಿದೆ.

ಚಾಲಕ ಹಾಗೂ ನಿರ್ವಾಹಕ ಲಾರಿಯಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!