Wednesday, July 6, 2022

Latest Posts

ಗ್ರಹಣದ ನಡವೆಯೂ ಊಟ ಸವಿದು ಮೂಢನಂಬಿಕೆಗೆ ತೆರೆ ಎಳೆದ ಪ್ರಗತಿಪರರು!

ಧಾರವಾಡ: ಕಂಕಣ ಸೂರ್ಯ ಗ್ರಹಣದ ವೇಳೆ ಏನನ್ನೂ ಸೇವಿಸಬಾರದೆಂಬ ಕಂದಾಚಾರದ ನಿಯಮಗಳನ್ನು ಗಾಳಿಗೆ ತೂರಿದ ಪ್ರಗತಿಪರ ಚಿಂತಕರು ನಗರದ ಕಡಪಾ ಮೈದಾನದಲ್ಲಿ ಅಡುಗೆ ಮಾಡಿ ಊಟದ ಜತೆಗೆ ಹಣ್ಣು-ಹಂಫಲ ಸೇವನೆ ಮಾಡುವ ಮೂಲಕ ಮೂಢನಂಬಿಕೆಗೆ ತೆರೆ ಎಳೆದರು.
ಗ್ರಹಣ ಕಾಲಕ್ಕೆ ಏನನ್ನೂ ತಿನ್ನಬಾರದು, ಹೆಚ್ಚಬಾರದು, ನೀರು ಸೇವಿಸಬಾರದೆಂಬ ಕೊಡ್ಡು ಸಂಪ್ರದಾಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೊರೋನಾ ಹಾವಳಿ ನಡೆವೆಯೂ ಮೂಢನಂಬಿಕೆ ಪ್ರತಿಪಾದಕರಿಗೆ ಉತ್ತರವಾಗಿ ವೈಜ್ಞಾನಿಕ ಹಾಡುಗಳು, ಮಾತು, ಚರ್ಚೆಗಳು ನಡೆಸಿದರು.
ಗ್ರಹಣದಿಂದ ನೀರಿನ ಮೇಲೆ ಪರೀಣಾಮ ಬೀರಲಿದೆಂಬ ಮನೆಯ ನೀರು ಹೊರ ಚೆಲ್ಲಿ ಪುನಃ ನಲ್ಲಿ, ಬಾವಿ, ಕೆರೆ ನೀರು ತುಂಬಿಸುತ್ತಾರೆ. ಮನೆಯ ನೀರಿಗೆ ಗ್ರಹಣದ ಕಿರಣಗಳು ತಾಕಿದರೆ, ತೆರೆದ ಬಾವಿ, ಹಳ್ಳ, ಹೊಳೆಗಳಲ್ಲಿ ನೀರಿಗೆ ಗ್ರಹಣ ಪರಿಣಾಮ ಬೀರುವುದಿಲ್ಲವೆವೆಂದು ಸಂಪ್ರದಾಯಸ್ಥರನ್ನು ಪ್ರಶ್ನಿಸಿದರು.
ಡಾ. ಸಂಜೀವ ಕುಲಕರ್ಣಿ, ಗರ್ಭಿಣಿ ಸ್ತ್ರಿಯನ್ನು ಗ್ರಹಣ ಕಾಲಕ್ಕೆ ಕೊಠಡಿಯಲ್ಲಿ ಕೂಡಿಹಾಕಿ ಅವಳು ಏನು ಮಾಡಬಾರದು, ಹೆಚ್ಚಬಾರದು. ಒಂದು ವೇಳೆ ಹೀಗೆ ಮಾಡಿದರೆ, ಹುಟ್ಟುವ ಮಗುವಿನ ತುಟಿಯೋ, ಕಿವಿಯೋ ಸೀಳಾಗುತ್ತದೆಂಬ ನಂಬಿಕೆ. ಹಾಗಾದರೆ, ಪ್ರಾಣಿ ಪಕ್ಷಿಗಳು ಗರ್ಭ ದರಿಸುತ್ತವೆ. ಇವುಗಳ ಮೇಲೆ ಈ ಗ್ರಹಣ ಏನೂ ಪರಿಣಾಮ ಬೀರುವುದಿಲ್ಲ ಏಕೆ? ಎಂದು ಪ್ರಶ್ನಿಸಿದರು.
ಚಿಂತಕ ಶಂಕರ ಹಲಗತ್ತಿ, ಗ್ರಹಣ ಕಾಲಕ್ಕೆ ನೀರು ಹಾಕಿದಂತೆ ತುಪ್ಪ, ಉಪ್ಪಿನಕಾಯಿ, ದವಸ ದಾನ್ಯ ಇತ್ಯಾದಿ ವಸ್ತು ಏಕೆ? ಚೆಲ್ಲುವುದಿಲ್ಲ. ಚಂದ್ರಲೋಕದ ಮೇಲೆ ಹೋಗಿ ಬಂದಿದ್ದೇವೆ. ಮಂಗಳ ಲೋಕಕ್ಕೂ ಹೋಗುವ ತಯಾರಿ ನಡೆದಿದೆ. ಇಂಥ ವಿಜ್ಞಾನದ ಯುಗದಲ್ಲಿ ಗ್ರಹಣದ ಕುರಿತು ಮೂಢನಂಬಿಕೆ ಖೇದದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷ ಗುರು ತಿಗಡಿ, ವಿ.ಎನ್.ಕೀರ್ತಿವತಿ, ಎಚ್.ಎಫ್ ಸುಮುದ್ರಿ, ಚಂದ್ರು ತಿಗಡಿ, ಎಚ್.ಎಫ್.ನದಾಫ್, ಮಹಾಂತೇಶ ನಾಡಗೌಡರ, ಮಲ್ಲಿಕಾರ್ಜುನ ಸೊಲಗಿ, ಪ್ರಕಾಶ ಬಾಳಿಕಾಯಿ, ಮಲ್ಲಿಕಾರ್ಜುನ ಚಿಕ್ಕಮಠ, ಶಿವಾನಂದ ನಾಗೂರ, ಎ.ಎಂ.ಖಾನ್, ಬಿ.ಎಸ್.ಪೂಜಾರ, ಶಿಕ್ಷಕ ಎಂ.ಡಿ.ಹೊಸಮನಿ, ನಾರಾಯಣ ಭಜಂತ್ರಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss