Tuesday, June 28, 2022

Latest Posts

ಗ್ರಾಮೀಣ ಅಭಿವೃದ್ಧಿಗೆ ಸಾಮಾಜಿಕ ಕಳಕಳಿ ಅಗತ್ಯ: ತಾಪಂ ಅಧ್ಯಕ್ಷ ಭದ್ರಯ್ಯ

ರಾಮನಗರ: ಸಾಮಾಜಿಕ ಕಳಕಳಿ ಇದ್ದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಕಾಣಲು ಸಾಧ್ಯ ಎಂದು ರಾಮನಗರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಭದ್ರಯ್ಯ ತಿಳಿಸಿದರು.

ಹೋಬಳಿಯ ಅವ್ವೇರಹಳ್ಳಿ ಹುಲಿಕೆರೆ-ಗುನ್ನೂರು ಗ್ರಾಮ ಪಂಚಾಯ್ತಿ ಕಛೇರಿ ಆವರಣದಲ್ಲಿ 74ನೇ ಸ್ವಾತಂತ್ರö್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ವಂತ ಖರ್ಚಿನಲ್ಲಿ ಕೆರೆ ಅಭಿವೃದ್ಧಿ ಕೈಗೊಂಡು ತೆಂಗಿನಕಲ್ಲು ಗ್ರಾಮದ ನಿವೃತ್ತ ಶಿಕ್ಷಕ ಕೆ.ಹುಚ್ಚಮರಿಗೌಡ ಅವರನ್ನು ಅಭಿನಂದಿಸಿ ಮಾತನಾಡಿದರು.

ಯುವಕರಿಗೆ ಸ್ಫೂರ್ತಿಯಾಗಲಿ: ಹುಚ್ಚಮರೀಗೌಡರು ತಮ್ಮ ನಿವೃತ್ತಿ ವೇತನದಲ್ಲಿ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಎರಡು ಕೆರೆ ನಿರ್ಮಿಸಿ ಅವುಗಳನ್ನು ಪುನಃ ಈ ವರ್ಷ ತಮ್ಮ ಸ್ವಂತ ಖರ್ಚಿನಿಂದಲೇ ಜೀಣೋದ್ಧಾರ ನಡೆಸಿ ಕೆರೆ ಅಭಿವೃದ್ಧಿ ಮಾಡಿದ್ದಾರೆ. ಅವರ ಸಾಧನೆ ಇಂದಿನ ಯುವಕರಿಗೆ ಸ್ಫೂರ್ತಿಯಾಗಲಿ ಎಂದು ತಿಳಿಸಿದರು.

ತಾ.ಪಂ.ಇಒ ಶಿವಕುಮಾರ್ ಮಾತನಾಡಿ, ತೆಂಗಿನಕಲ್ಲು ಗ್ರಾಮದಲ್ಲಿ ನಿವೃತ್ತ ಶಿಕ್ಷಕ ಹುಚ್ಚುಮರೀಗೌಡರು ತಮ್ಮ ಸ್ವಂತ ಖರ್ಚಿನಲ್ಲಿ ಕೆರೆ ನಿರ್ಮಿಸಿದ್ದಾರೆ ಎಂದು ತಿಳಿದುಬಂದಿತು. ನರೇಗಾ ಯೋಜನೆಯಡಿ ಕೆರೆಯನ್ನು ಜೀಣೋದ್ಧಾರ ಮಾಡಬೇಕೆಂದು ಅಂದುಕೊAಡಾ ಸ್ವತಃ ಹುಚ್ಚಮರೀಗೌಡರೇ ಬಂದು ಆ ಕೆರೆಯನ್ನು ನಾನೇ ಜೀಣೋದ್ಧಾರ ಕೈಗೊಳ್ಳುತ್ತೇನೆ. ನನ್ನಲ್ಲಿ ನಿವೃತ್ತಿ ವೇತನದ ಹಣವಿದೆ. ಅದರಲ್ಲಿ ಕೆಲಸ ಕೈಗೊಳ್ಳುತ್ತೇನೆ ಎಂದು ತಿಳಿಸಿ ಕೇವಲ 15 ದಿನಗಳಲ್ಲಿ ಕೆರೆಗೆ ಕಾಯಕಲ್ಪ ಕಲ್ಪಿಸಿ ಜೀಣೋದ್ಧಾರ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ತಾಪಂ ಹಾಗೂ ಗ್ರಾಪಂ ವತಿಯಿಂದ ನಿವೃತ್ತ ಶಿಕ್ಷಕ ಕೆ.ಹುಚ್ಚುಮರೀಗೌಡ ಅವರಿಗೆ ಸಾಲು, ನೆನಪಿಸ ಕಾಣಿಕ ನೀಡಿ ಗೌರವಿಸಲಾಯಿತು. ಗ್ರಾಪಂ ಆಡಳಿತಾಧಿಕಾರಿ ಚಿಕ್ಕಣ್ಣ, ತಾ.ಪಂ ಸಹಾಯಕ ನಿರ್ದೇಶಕ ರೂಪೇಶ್ ಕುಮಾರ್, ಪಿಡಿಒ ವಿ.ವೆಂಕಟೇಶ್, ಕಾರ್ಯದರ್ಶಿ ಜಯಶೀಳ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss