Monday, August 8, 2022

Latest Posts

ಗ್ರಾಮೀಣ ಉದ್ದಿಮೆದಾರರಿಗೆ ಉಚಿತ ತರಬೇತಿಗಳೊಂದಿಗೆ 18 ವರ್ಷಗಳ ಸೇವೆ ಸಲ್ಲಿಸುತ್ತಿರುವ ವೆಳ್ಳಿಕೋತ್ ಇನ್‌ಸ್ಟಿಟ್ಯೂಟ್

ಹೊಸದಿಗಂತ ವರದಿ, ಕಾಸರಗೋಡು:

ಗ್ರಾಮೀಣ ವಲಯದ ಯುವಜನ ಉದ್ದಿಮೆದಾರರ ಅಭಿವೃದ್ಧಿಯ ಗುರಿಯೊಂದಿಗೆ ಕಳೆದ 18 ವರ್ಷಗಳಿಂದ ಅನೇಕ ಯೋಜನೆಗಳೊಂದಿಗೆ ಕಾಸರಗೊಡು ಜಿಲ್ಲೆಯ ವೆಳ್ಳಿಕೋತ್ ಇನ್‌ಸ್ಟಿಟ್ಯೂಟ್ ರಂಗದಲ್ಲಿದೆ. 6 ದಿನಗಳಿಂದ ತೊಡಗಿ 45 ದಿನಗಳ ಅವಧಿಯ ಕಿರು ಕಾಲಾವಧಿಯ ತರಬೇತಿಗಳನ್ನು ಈ ವೆಳ್ಳಿಕೋತ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದ ನೇತೃತ್ವದಲ್ಲಿ ನೀಡಲಾಗುತ್ತಿದೆ. ವಸತಿ ಸೌಲಭ್ಯ , ಆಹಾರ ವ್ಯವಸ್ಥೆ ಸಹಿತ ಪೂರ್ಣ ರೂಪದಲ್ಲಿ ಉಚಿತವಾಗಿ ಈ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿದೆ.
ಬಿಸಿನೆಸ್ ಸ್ಟಿಮ್ಯುಲೇಷನ್ ಗೇಮ್ಸ್ , ಬ್ಯಾಂಕಿಂಗ್, ಆರ್ಥಿಕ ಪರಿಣತಿ, ಪ್ರಾಜೆಕ್ಟ್ ರಿಪೋರ್ಟ್ ಸಿದ್ಧತೆ, ಮಾರ್ಕೆಟ್ ಸರ್ವೇ, ಯೂನಿಟ್ ವಿಸಿಟ್ ಸಹಿತ ವಿವಿಧ ವಿಷಯಗಳನ್ನು ಅಳವಡಿಸಿ ಇಲ್ಲಿ ಉದ್ದಿಮೆದಾರರಿಗೆ ತರಬೇತಿ ನೀಡಲಾಗುತ್ತಿದೆ. ಪತ್ರಿಕಾ ಜಾಹೀರಾತು, ಉದ್ದಿಮೆದಾರರ ತರಬೇತಿ ಕ್ಯಾಂಪಸ್, ಸರಕಾರಿ ಏಜೆನ್ಸಿಗಳ ಮುಖಾಂತರವೂ ತರಬೇತಿಗಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ವರೆಗೆ ಒಟ್ಟು11,573 ಮಂದಿ ಈ ಸಂಸ್ಥೆಯ ಮೂಲಕ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಕೇಕ್ ತಯಾರಿ, ಅಣಬೆ ಕೃಷಿ , ಫಾಸ್ಟ್ ಫುಡ್ ಸ್ಟಾಲ್ ಇತ್ಯಾದಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಜಿಲ್ಲಾಡಳಿತದ ನೇತೃತ್ವದಲ್ಲಿ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗಾಗಿ ಆರಂಭಿಸಲಾದ ಕೂಟ್ ಎಂಬ ಯೋಜನೆಯ ಮೂಲಕ 30 ಮಂದಿ ಮಹಿಳೆಯರು ಮುಂದಿನ ಕ್ವಾರ್ಟರ್‌ನಲ್ಲಿ ಈ ಸಂಸ್ಥೆಯಲ್ಲಿ ಹೊಲಿಗೆ ತರಬೇತಿ ಪಡೆಯಲಿದ್ದಾರೆ. ಆಂಪೆಯರ್ ಇಲೆಕ್ಟರಿಕಲ್ಸ್ ಭೀಮನಡಿ, ವಿನತಾ ಹೋಟೆಲ್ ಇರಿಯಣ್ಣಿ , ಗ್ರಾಮಶ್ರೀ ಯೂನಿಟ್ ಪಾಕಂ, ಬಿಸ್ಮಿ ಕ್ಯಾಟರಿಂಗ್ ಯೂನಿಟ್ ಪೆರಿಯ, ಮಾ ನಾಚ್ಯುರಲ್ ಚಿಪ್ಸ್ ಪಾಣತ್ತೂರು, ಡ್ರೀಂ ಲೇಡೀಸ್ ಟೈಲರಿಂಗ್ ಬೋವಿಕ್ಕಾನ, ಗ್ರೇಂಡ್ ಬೇಕರ್ಸ್ ಎಂಬೀ ಉದ್ದಿಮೆಗಳು ಕಳೆದ ವರ್ಷ ಈ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಮಂದಿ ಆರಂಭಿಸಿರುವ ಸಂಸ್ಥೆಗಳು.
ತೆಂಗಿನ ಮರವೇರುವ ತರಬೇತಿ ಪಡೆದಿರುವ ಪ್ರಕಾಶ್ ವರ್ದಾನಾ, ಮ್ಯೂರಲ್ ಆರ್ಟಿಸ್ಟ್ ಕೆ.ವಿ.ಬಿಜೀಶ್ ಎಂಬವರು ಕಳೆದ ವರ್ಷ ಈ ಸಂಸ್ಥೆಯಲ್ಲಿ ತರಬೇತು ಪಡೆದ ಖ್ಯಾತನಾಮರು. 2003ನೇ ಮೇ 18ರಂದು ಜಿಲ್ಲೆಯಲ್ಲಿ ಆರಂಭಿಸಲಾದ ವೆಳ್ಳಿಕೋತ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರವು ಕಾಞಂಗಾಡು ನಗರದಿಂದ 3 ಕಿಲೋ ಮೀಟರ್ ದೂರದ ಅಜಾನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 1.50 ಎಕ್ರೆ ಜಾಗದಲ್ಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss