Sunday, August 14, 2022

Latest Posts

ಗ್ರಾಮೀಣ ಪ್ರದೇಶದಲ್ಲೂ ಡ್ರಗ್ಸ್ ಜಾಲದ ತನಿಖೆ ನಡೆಸಿ: ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್

ರಾಮನಗರ: ಡ್ರಗ್ಸ್ ಜಾಲವು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರದೆ ಗ್ರಾಮೀಣ ಪ್ರದೇಶಗಳಿಗೂ ತನ್ನ ಕದಂಬ ಬಾಹುವನ್ನು ವಿಸ್ತರಿಸಿಕೊಂಡಿದ್ದು ತನಿಖಾಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲೂ ಡ್ರಗ್ಸ್ ಜಾಲದ ತನಿಖೆಯನ್ನು ನಡೆಸಬೇಕೆಂದು ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಒತ್ತಾಯಿಸಿದರು. ಇಲ್ಲಿನ ತಮ್ಮ ಕಚೇರಿಯಲ್ಲಿ ಡ್ರಗ್ಸ್ ಜಾಲದ ತನಿಖೆ ಸಂಬoಧ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಮಾದಕ ದ್ರವ್ಯ ಜಾಲಕ್ಕೆ ಸಂಬoಧ ಪಟ್ಟಂತೆ ತನಿಖಾ ಸಂಸ್ಥೆಗಳು ತನಿಖೆಯನ್ನು ನಡೆಸುತ್ತಿರುವುದು ಮತ್ತು ಜಾಲವನ್ನು ಭೇದಿಸಿ ಬೇರೆ ಸಮೇತ ಕಿತ್ತುಹಾಕಲು ಹೊರಟಿರುವುದು ಸ್ವಾಗತಾರ್ಹ ಎಂದರು. ಸಿನಿಮಾ ನಟ ನಟಿಯರು ಸೇರಿದಂತೆ ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಮಕ್ಕಳು, ರಾಜಕೀಯ ವ್ಯಕ್ತಿಗಳ ಹಿಂಬಾಲಕರು ಈ ದಂಧೆಯ ಹಿಂದೆ ಇದ್ದಾರೆ. ಅವರ ಆಶೀರ್ವಾದದೊಂದಿಗೆ ಈ ಜಾಲವು ಯಶಸ್ವಿಯಾಗಿ ನಡೆಯುತ್ತಿದ್ದು ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಕರು ಪ್ರಮುಖವಾಗಿ ಈ ಜಾಲದಲ್ಲಿ ಸಿಲುಕಿಕೊಂಡಿದ್ದಾರೆ. ಒಂದು ಕ್ಷೇತ್ರವನ್ನು ಹಾಗೂ ನಗರವನ್ನು ಕೇಂದ್ರಕರಿಸಿಕೊAಡು ತನಿಖೆ ನಡೆಸಿದರೆ ಸಾಲದು. ಡ್ರಗ್ಸ್ ಜಾಲವು ಗ್ರಾಮೀಣ ಪ್ರದೇಶ, ಹಳ್ಳಿಗಳಿಗೂ ವ್ಯಾಪಿಸಿದೆ. ಸಮಾಜದ ವ್ಯವಸ್ಥೆಯನ್ನು ವಿದ್ಯಾರ್ಥಿಗಳ ಭವಿಷ್ಯವನ್ನು ನಾಶ ಮಾಡುತ್ತಿದ್ದು ಈ ಡ್ರಗ್ಸ್ ಜಾಲವನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದರು. ರಾಜಧಾನಿಯಂತೆ ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಡ್ರಗ್ಸ್ ವ್ಯವಹಾರವು ಅವ್ಯಾಹತವಾಗಿ ನಡೆಯುತ್ತಿದೆ. ಕಾಲೇಜು ವಿದ್ಯಾರ್ಥಿಗಳು, ಯುವಕರು ಮಾದಕ ದ್ರವ್ಯದ ಸೇವನೆಗೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಡ್ರಗ್ಸ್ ಜಾಲವನ್ನು ಬೇರು ಸಮೇತ ಕಿತ್ತುಹಾಕಿ ಡ್ರಗ್ಸ್ಮುಕ್ತ ರಾಜ್ಯವನ್ನಾಗಿ ಮಾಡುವುದಾಗಿ ಹೇಳುವ ಬಿಜೆಪಿ ಸರ್ಕಾರ ಹಾಗೂ ಜಾಲವನ್ನು ಬೇಧಿಸುತ್ತಿರುವ ತನಿಖಾ ಸಂಸ್ಥೆಗಳು ರಾಮನಗರ ಜಿಲ್ಲೆಯಲ್ಲೂ ತನಿಖೆ ನಡೆಸಿ ಜಾಲವನ್ನು ಬೇಧಿಸಿ ತಪ್ಪಿತಸ್ಥರನ್ನು ಕಾನೂನಿನಡಿ ಶಿಕ್ಷಿಸಬೇಕೆಂದರು. ಜಿಲ್ಲೆಗೆ ಹೊಸದಾಗಿ ಬಂದಿರುವ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರು ಡ್ರಗ್ಸ್ ತಡೆಗೆ ಕಾರ್ಯಕ್ರಮ ರೂಪಿಸಬೇಕೆಂದು ಮನವಿ ಮಾಡಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss