Saturday, July 2, 2022

Latest Posts

ಗ್ರಾಮೀಣ ಭಾಗದಲ್ಲಿ ಯುವ ಜನರಿಗಾಗಿ ಪ್ರತ್ಯೇಕ ಗ್ರಾಮ ಸಭೆ ನಡೆಯಲಿ: ಕೆ.ಟಿ.ತಿಪ್ಪೇಸ್ವಾಮಿ

ಹೊಸ ದಿಗಂತ ವರದಿ, ಮಂಗಳೂರು:

ರಾಜ್ಯದಲ್ಲಿ ಪೂರ್ಣ ಪ್ರಮಾಣದ ಯುವಜನ ನೀತಿ ಮರು ಪರಿಷ್ಕರಣೆಗೊಂಡು ಜಾರಿಯಾಗಬೇಕಾಗಿದೆ. ಯುವ ಜನರಿಗಾಗಿ
ಗ್ರಾಮೀಣ ಭಾಗದಲ್ಲಿ ಪ್ರತ್ಯೇಕ ಗ್ರಾಮ ಸಭೆ ನಡೆಯಬೇಕು ಎಂದು ಕೇಂದ್ರ ಸರಕಾರದ ರಾಷ್ಟ್ರೀಯ ಯುವಜನ ಅಭಿವೃದ್ಧಿ ನಿಧಿ ಕಾರ್ಯಕಾರಿಣಿ ಮತ್ತು ಪರಿಷತ್ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೊರಗಪ್ಪ ಸಭಾಂಗಣದಲ್ಲಿ ಭಾನುವಾರ ಸಂವಾದ ಯುವ ಸಂಪನ್ಮೂಲ ಕೇಂದ್ರ ಮಂಗಳೂರು ವತಿಯಿಂದ ನಡೆದ ಯುವಜನ ಹಕ್ಕಿನ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನರ ಸಬಲೀಕರಣಕ್ಕಾಗಿ ಯುವಜನರ ಶಿಕ್ಷಣ, ಆರೋಗ್ಯ, ಉದ್ಯೋಗದ ಪ್ರಸ್ತಾವಗಳು ಇರುವ, ಭದ್ರತೆಯ ಭರವಸೆ ನೀಡುವ, ಯುವಕ ಯುವತಿಯರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಕ್ಕುಗಳ ನೆಲೆಯ ರಾಜ್ಯ ಮತ್ತು ರಾಷ್ಟ್ರೀಯ ಯುವನೀತಿ ರೂಪಿಸಬೇಕು. ಪ್ರಸ್ತುತ ಕೇಂದ್ರ ಸರಕಾರ ತಯಾರಿ ಮಾಡುತ್ತಿರುವ ಯುವನೀತಿ ಇಂತಹ ಅಂಶಗಳನ್ನು ಒಳಗೊಂಡಿರಬೇಕು. ಈ ಹಿಂದೆ ಕರ್ನಾಟಕ ರಾಜ್ಯ ಯುವ ನೀತಿ 2012ರ ಶಿಫಾರಸಿನಂತೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಾಗಿ ಮರು ನಾಮಕರಣಗೊಡಿತು. ಹೆಸರು ಬದಲಾಯಿತು, ಆದರೆ ಸಬಲೀಕರಣದ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ ಎಂದರು.
ಕಲಾವಿದ ಮೋಹನ್ ಶೇಣಿ ಅತಿಥಿಯಾಗಿದ್ದರು. ಬೆಂಗಳೂರು ಸಂವಾದ ಯುವ ಸಂಪನ್ಮೂಲ ಕೇಂದ್ರದ ಸಂಚಾಲಕ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss