ಹೊಸದಿಗಂತ ಆನ್ ಲೈನ್ ಡೆಸ್ಕ್:
ಗೋವುಗಳ ಸಗಣಿಯಿಂದ ತಯಾರಿಸಲಾದ ‘ವೇದಿಕ್ ಪೇಯಿಂಟ್’ ಶೀಘ್ರವೇ ಬಿಡುಗಡೆಗೊಳ್ಳಲಿದ್ದು, ಇದು ರೈತರ ಆದಾಯವನ್ನು ಹೆಚ್ಚಿಸಲೂ ನೆರವಾಗಲಿದೆ . ಈ ‘ವೇದಿಕ್ ಪೇಯಿಂಟ್’ ಜಾನುವಾರು ಕೃಷಿಕರಿಗೆ ವಾರ್ಷಿಕ 55,000ರೂ.ಗಳ ಹೆಚ್ಚುವರಿ ಆದಾಯ ತಂದುಕೊಡಲಿದೆ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಹೇಳಿದ್ದಾರೆ. ಅವರು ಈ ವೇದಿಕ್ ಪೇಯಿಂಟ್ನ್ನು ಪರಿಚಯಿಸುವ ಟ್ವೀಟ್ ಸಂದೇಶ ನೀಡಿದ್ದಾರೆ.
“ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಲು ಮತ್ತು ರೈತರಿಗೆ ಹೆಚ್ಚುವರಿ ಆದಾಯವನ್ನು ಗಳಿಸಲು, ನಾವು ಶೀಘ್ರದಲ್ಲೇ ಖಾದಿ ಮತ್ತು ಗ್ರಾಮ ಕೈಗಾರಿಕಾ ಆಯೋಗದ ಮೂಲಕ ಗೋವಿನ ಸಗಣಿಗಳಿಂದ ಮಾಡಿದ ‘ವೇದಿಕ್ ಪೇಯಿಂಟ್‘ ನ್ನು ಬಿಡುಗಡೆಗೊಳಿಸಲಿದ್ದೇವೆ ಎಂಬುದಾಗಿ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.
ಈ ಪರಿಸರಸ್ನೇಹಿ ಪೇಯಿಂಟ್ ಡಿಸ್ಟೆಂಪರ್ ಮತ್ತು ಎಮಲ್ಷನ್ ರೂಪಗಳಲ್ಲಿ ಬರುತ್ತದೆ ಮತ್ತು ಕೇವಲ ನಾಲ್ಕು ಗಂಟೆಗಳಲ್ಲೇ ಒಣಗುತ್ತದೆ .ವಿಷಕಾರಿ ಅಂಶಗಳಿಲ್ಲದ, ಬ್ಯಾಕ್ಟೀರಿಯಾ ನಿರೋಧಕ , ಶಿಲೀಂಧ್ರ ನಿರೋಧಕ ಮತ್ತು ತೊಳೆಯಬಹುದಾದಂತಹ ಗುಣಗಳನ್ನು ಹೊಂದಿರುವುದು ವಿಶೇಷ ಎಂಬುದಾಗಿ ಅವರು ವಿವರಿಸಿದ್ದಾರೆ.
ग्रामीण इकोनॉमी को बल मिले और किसानों को अतिरिक्त आमदनी हो इसलिए Khadi and Village Industries Commission के माध्यम से हम जल्द ही गाय के गोबर से बना ‘वैदिक पेन्ट' लॅान्च करने वाले हैं। @ChairmanKvic pic.twitter.com/zhQpa3Es5i
— Nitin Gadkari (@nitin_gadkari) December 17, 2020