ಹೊಸ ದಿಗಂತ ವರದಿ, ಶಿರಸಿ:
ಗ್ರಾಮ ಪಂಚಾಯತಿ ಮಟ್ಟದಲ್ಲಿ ಬಲಗೊಂಡರೆ ಮಾತ್ರ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಹಿಡಿಯಲು ಸಾಧ್ಯವೆಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು.
ಅವರಿಂದು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತ, ಗ್ರಾಮ ಪಂಚಾಯತ ಚುನಾವಣೆ ಎದುರಿಸದೆ ಯಾರೂ ಕೂಡ ಶಾಸಕರಾಗಿ, ಸಂಸದರಾಗಿ ಅಕಾರ ಹಿಡಿಯಲು ಸಾಧ್ಯವಿಲ್ಲ. ಇವೆಲ್ಲದಕ್ಕೂ ಮೂಲ ಗ್ರಾಮ ಪಂಚಾಯತಿ ಚುನಾವಣೆ ಎಂದರು. ನಾವೀಗ ನಮ್ಮ ಪಕ್ಷದಲ್ಲಿ ನಿಂತು ಸೋತವರನ್ನು ಕಡೆಗಣಿಸುವಂತಿಲ್ಲಾ. ನಮ್ಮಲ್ಲಿಯೇ ಆದ ಕೆಲವೊಂದು ಪ್ರಮಾದದಿಂದ ಸೋತಿರಬಹುದು. ಸೋತವರಿಗೆ ಧೈರ್ಯತುಂಬಿ ಅವರನ್ನು ಕೂಡಾ ಪಕ್ಷದಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕೆಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ ಬಿಜೆಪಿ ಬಲಗೊಂಡಿದೆ ಎನ್ನುವುದಕ್ಕೆ ಈ ಚುನಾವಣೆಯೇ ಸಾಕ್ಷಿಯಾಗಿದೆ. ಕಾರವಾರದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದು ತೋರಿಸಿದ್ದಾರೆ.
18 ಪಂಚಾಯತಿಗಳಲ್ಲಿ 12ರಲ್ಲಿ ಗೆದ್ದು ತೋರಿಸಿದ್ದೆವೆಂದರು. ಬಿಜೆಪಿ ಎಲ್ಲರನ್ನೊಳಗೊಂಡು ಸಂಘಟನಾತ್ಮವಾಗಿ ಬೆಳೆಯುತ್ತಿದೆ. ಇದಕ್ಕಾಗಿಯೇ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಸದಸ್ಯರನ್ನೊಳಗೊಂಡು ಜನ ಸೇವಕ ಸಮಾವೇಶವನ್ನು ಮಾಡಲಾಗುತ್ತಿದೆ. ಎಂದರು.
ಬಿಜೆಪಿ ಜಿಲ್ಲಾದ್ಯಕ್ಷ ವೆಂಕಟೇಶ ನಾಯಕ್ ಮಾತನಾಡಿ, ಇದೇ ಜನವರಿ 12 ರಂದು ಮದ್ಯಾಹ್ನ ಮೂರು ಗಂಟಗೆ ಅಂಕೋಲದಲ್ಲಿ ಜನ ಸೇವಕ ಸಮಾವೇಶ ನಡೆಯಲಿದ್ಸು 14 ಮಂಡಲದ ಪದಾದಿಕಾರಿಗಳು ಸಮಾವೇಶಕ್ಕೆ ಆಗಮಿಸುವಂತೆ ಕೊರಿದರು.ಸಭೆಯಲ್ಲಿ ಮಾಜಿ ಶಾಸಕರುಗಳದ ವಿ.ಎಸ್. ಪಾಟಿಲ್,ಸುನೀಲ್ ಹೆಗಡೆ,ಪ್ರಮುಖರಾದ ಗಿರೀಶ ಪಟೆಲ್, ಪ್ರಸನ್ ಕೆರೆಕೈ,ಪ್ರಮೋದ ಹೆಗಡೆ,ಭಾರತಿ ಜಂಬಗಿ ಮುಂತಾದವರು ಉಪಸ್ತಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ ನಿರ್ವಹಣೆಮಾಡಿದರು.