spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗ್ರಾಮ ಪಂಚಾಯತ್ ಅಭ್ಯರ್ಥಿಯನ್ನು ಸೋಲಿಸಲು ವಾಮಾಚಾರ

- Advertisement -Nitte

ಹೊಸದಿಗಂತ ವರದಿ, ವಿಜಯಪುರ:

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿವಪುರ ಗ್ರಾಮದ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯ ಸೋಲಿಸಲು ಊಡೂ ಮಾದರಿ ವಾಮಾಚಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಶಿವಪುರ ಗ್ರಾಮದಲ್ಲಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದ ಬಸಲಿಂಗಪ್ಪ ಜೆಟ್ಟಪ್ಪ ಮಕಾಳಿ ಉರ್ಫ್ ಬಸಲಿಂಗಪ್ಪ ಸಾಹುಕಾರ್ ಎಂಬ ಅಭ್ಯರ್ಥಿಯ ಭಾವಚಿತ್ರಕ್ಕೆ ಮುಳ್ಳು ಚುಚ್ಚಿ ವಾಮಾಚಾರ ಮಾಡಿದ ಊಡೂ ಗೊಂಬೆ ಪತ್ತೆಯಾಗಿದೆ. ಈ ಗೊಂಬೆಗೆ ಬಸಲಿಂಗಪ್ಪನ ಭಾವಚಿತ್ರವನ್ನು ಮುಳ್ಳಿನ ಮೂಲಕ ಚುಚ್ಚಿ, ದಾರದಿಂದ ಕಟ್ಟಿದ ದುಷ್ಕರ್ಮಿಗಳು ಊರ ಹೊರಗಿನ ಸಮಾಧಿ ಮೇಲೆ ಇಟ್ಟು, ಕುಂಕುಮದಿಂದ ವಾಮಾಚಾರ ಮಾಡಿದ್ದಾರೆ. ಇದನ್ನು ಕಂಡ ಅಭ್ಯರ್ಥಿ ಬಸಲಿಂಗಪ್ಪ ಆಘಾಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಇನ್ನು ಕಾಕತಾಳಿಯವೋ ಅಥವಾ ವಾಮಾಚಾರದ ಪರಿಣಾಮವೋ ಗೊತ್ತಿಲ್ಲ, ಚುನಾವಣೆಯಲ್ಲಿ ಬಸಲಿಂಗಪ್ಪ ಮಕಾಳಿ 395 ಮತಗಳನ್ನು ಪಡೆದು ಸೋತಿದ್ದು, ಇನ್ನಿಲ್ಲದ ಚರ್ಚೆಗೆ ಗ್ರಾಸವಾಗಿದೆ.
ತಾಲೂಕಾಡಳಿತ, ಮೂಕಿಹಾಳ ಪಂಚಾಯಿತಿ ಅಧಿಕಾರಿಗಳು ಶಿವಪುರ ಗ್ರಾಮಕ್ಕೆ ಭೇಟಿ ನೀಡಿ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss