Friday, July 1, 2022

Latest Posts

ಗ್ರಾಮ ಪಂಚಾಯತ್ ಚುನಾವಣೆ: ಕಲಬುರಗಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಹೊಸದಿಗಂತ ವರದಿ, ಕಲಬುರಗಿ:

ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದ ಮತದಾನ ಪ್ರಕ್ರಿಯೆ ನಾಳೆ(ಇಂದು) ನಡೆಯಲಿದೆ. ನಾಳೆ ನಡೆಯಲಿರುವ ಮೊದಲ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ದತೆಯನ್ನು ಮಾಡಿಕೊಂಡಿದ್ದು, ಚುನಾವಣಾ ಸಿಬ್ಬಂದಿ ಮತ ಪೆಟ್ಟಿಗೆಗಳೊಂದಿಗೆ ಮತಗಟ್ಟೆಗಳತ್ತು ಮುಖ ಮಾಡಿದ್ದಾರೆ.
ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತ ಚುನಾವಣೆ ನಡೆಯಲಿವೆ. ಮೊದಲ ಹಂತದಲ್ಲಿ 126 ಗ್ರಾಮ ಪಂಚಾಯತಗಳ ಚುನಾವಣೆ ಜರುಗಲಿದೆ. ಎರಡನೆ ಹಂತದಲ್ಲಿ 116 ಗ್ರಾಮ ಪಂಚಾಯತಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಕಲಬುರಗಿ, ಆಳಂದ, ಅಫಜಲಪುರ, ಕಮಲಾಪುರ, ಕಾಳಗಿ ಹಾಗೂ ಶಹಬಾದ ತಾಲೂಕಿನಲ್ಲಿ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 13,26,400 ಮತದಾರರಿದ್ದು, ಇದರಲ್ಲಿ ಪುರುಷರು-6,76,421 ಹಾಗೂ ಮಹಿಳೆಯರು-6,49872 ಮತ್ತು ಇತರೆ -107 ಮತದಾರರಿದ್ದಾರೆ.
ಮೊದಲ ಹಂತದ ಗ್ರಾ,ಪ. ಚುನಾವಣೆ ವಿವರ
1) ಕಲಬುರಗಿ- ಗ್ರಾಮ ಪಂಚಾಯತ ಸಂಖ್ಯೆ 28, ಒಟ್ಟು ಸ್ಥಾನಗಳ ಸಂಖ್ಯೆ-523, ಉಮೇದುವಾರಿಕೆಗಳನ್ನು ಹಿಂಪಡೆದಿರುವ ಅಭ್ಯರ್ಥಿಗಳ ಸಂಖ್ಯೆ-314, ಅವಿರೋಧವಾಗಿ ಆಯ್ಕೆಯಾದ ಸದಸ್ಯರ ಸಂಖ್ಯೆ-25 ಹಾಗೂ ಚುನಾವಣೆ ನಡೆಯಲಿರುವ ಸ್ಥಾನಗಳ ಸಂಖ್ಯೆ-498.
2) ಆಳಂದ-ಗ್ರಾಮ ಪಂಚಾಯತಗಳ ಸಂಖ್ಯೆ-36, ಒಟ್ಟು ಸ್ಥಾನಗಳ ಸಂಖ್ಯೆ-600, ಉಮೇದುವಾರಿಕೆಗಳನ್ನು ಹಿಂಪಡೆದಿರುವ ಅಭ್ಯರ್ಥಿಗಖ ಸಂಖ್ಯೆ-381, ಅವಿರೋಧವಾಗಿ ಆಯ್ಕೆಯಾದ ಸದಸ್ಯರ ಸಂಖ್ಯೆ-40, ಚುನಾವಣೆಗಳು ನಡೆಯಲಿರುವ ಸ್ಥಾನಗಳ ಸಂಖ್ಯೆ-560.
3) ಅಫಜಲಪುರ- ಗ್ರಾಮ ಪಂಚಾಯತಗಳ ಸಂಖ್ಯೆ-28, ಒಟ್ಟು ಸ್ಥಾನಗಳ ಸಂಖ್ಯೆ-498, ಉಮೇದುವಾರಿಕೆಗಳನ್ನು ಹಿಂಪಡೆದಿರುವ ಅಭ್ಯರ್ಥಿಗಳ ಸಂಖ್ಯೆ-480, ಅವಿರೋಧವಾಗಿ ಆಯ್ಕೆಯಾದ ಸದಸ್ಯರ ಸಂಖ್ಯೆ-37, ಚುನಾವಣೆಗಳು ನಡೆಯಲಿರುವ ಸ್ಥಾನಗಳ ಸಂಖ್ಯೆ-461.
4)ಕಮಲಾಪುರ- ಗ್ರಾಮ ಪಂಚಾಯತಗಳ ಸಂಖ್ಯೆ-16, ಒಟ್ಟು ಸ್ಥಾನಗಳ ಸಂಖ್ಯೆ-270, ಉಮೇದುವಾರಿಕೆಗಳನ್ನು ಹಿಂಪಡೆದಿರುವ ಅಭ್ಯರ್ಥಿಗಳ ಸಂಖ್ಯೆ-145, ಅವಿರೋಧವಾಗಿ ಆಯ್ಕೆಯಾದ ಸದಸ್ಯರ ಸಂಖ್ಯೆ-11, ಚುನಾವಣೆಗಳು ನಡೆಯಲಿರುವ ಸ್ಥಾನಗಳ ಸಂಖ್ಯೆ-259.
5) ಕಾಳಗಿ- ಗ್ರಾಮ ಪಂಚಾಯತ್‍ಗಳ ಸಂಖ್ಯೆ-14, ಒಟ್ಟು ಸ್ಥಾನಗಳ ಸಂಖ್ಯೆ-239, ಉಮೇದುವಾರಿಕೆಗಳನ್ನು ಹಿಂಪಡೆದಿರುವ ಅಭ್ಯರ್ಥಿಗಳ ಸಂಖ್ಯೆ-100, ಅವಿರೋಧವಾಗಿ ಆಯ್ಕೆಯಾದ ಸದಸ್ಯರ ಸಂಖ್ಯೆ-17, ಚುನಾವಣೆಗಳು ನಡೆಯಲಿರುವಸ್ಥಾನಗಳ ಸಂಖ್ಯೆ-239.
6) ಶಹಾಬಾದ್- ಗ್ರಾಮ ಪಂಚಾಯತಗಳ ಸಂಖ್ಯೆ-4, ಒಟ್ಟು ಸ್ಥಾನಗಳ ಸಂಖ್ಯೆ-90, ಉಮೇದುವಾರಿಕೆಗಳನ್ನು ಹಿಂಪಡೆದಿರುವ ಅಭ್ಯರ್ಥಿಗಳ ಸಂಖ್ಯೆ-60, ಅವಿರೋಧವಾಗಿ ಆಯ್ಕೆಯಾದ ಸದಸ್ಯರ ಸಂಖ್ಯೆ-11, ಚುನಾವಣೆಗಳು ನಡೆಯಲಿರುವ ಸ್ಥಾನಗಳ ಸಂಖ್ಯೆ-79.
ಹೀಗೆ ಒಟ್ಟು ಕಲಬುರಗಿ ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ 126 ಗ್ರಾಮ ಪಂಚಾಯತಿಗಳ ಸಂಖ್ಯೆಯಿದ್ದು, 2220 ಒಟ್ಟು ಸ್ಥಾನಗಳಿವೆ. ಇದರಲ್ಲಿ 1480 ಉಮೇದುವಾರಿಕೆಗಳನ್ನ ಅಭ್ಯರ್ಥಿಗಳು ಹಿಂಪಡೆದಿದ್ದಾರೆ. 141 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟಾರೆ 2096 ಸ್ಥಾನಗಳಿಗೆ ಮೊದಲ ಹಂತದಲ್ಲಿ ಗ್ರಾಮ ಪಂಚಾಯತ ಚುನಾವಣೆ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss