Wednesday, July 6, 2022

Latest Posts

ಗ್ರಾಮ ಸ್ವರಾಜ್ಯ ಸಮಾವೇಶ| ಕಾರ್ಯಕರ್ತನನ್ನು ನಾಯಕನನ್ನಾಗಿ ಮಾಡುವ ಸಮಯ: ಲಕ್ಷ್ಮಣ ಸವದಿ

ಹೊಸದಿಗಂತ ವರದಿ,ಕಲಬುರಗಿ:

ಪಕ್ಷಕೋಸ್ಕರ ಹಗಲಿರುಳು ದುಡಿದು ಪಕ್ಷವನ್ನು ಜಯದ ಹಾದಿಗೆ ತಂದು ನಿಲ್ಲಿಸಿದ, ಪಕ್ಷದ ಜೀವಾಳವಾಗಿರುವ ಕಾರ್ಯಕರ್ತನನ್ನು, ನಾಯಕನನ್ನಾಗಿ ಮಾಡುವ ಸಮಯ ಬಂದಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ನಗರದ ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತನ ಪರಿಶ್ರಮ ಹಾಗೂ ಪ್ರಾಮಾಣಿಕತೆಗೆ ಬೆಲೆ ಕೊಟ್ಟು ಅವನ ಸ್ಥಾನವನ್ನು ಎತ್ತರಕ್ಕೆ ಒಯ್ಯುವ ಸಮಯವೇ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕಾರ್ಯಕರ್ತನನ್ನು ಗೆಲ್ಲಿಸುವುದು ಎಂದರು.

74 ವರ್ಷದಿಂದ ಕಾಂಗ್ರೆಸ್ ಪಕ್ಷವು ಕಾರ್ಯಕರ್ತನನ್ನು ಕೇವಲ ಬಳಸಿಕೊಳ್ಳುವುದನ್ನು ಬಿಟ್ಟರೆ, ಅವರಿಗೆ ಯಾವ ನ್ಯಾಯವನ್ನು ಸಹ ನೀಡಿಲ್ಲ, ಆದರೆ ನಮ್ಮ ಪಕ್ಷದಲ್ಲಿ ಧ್ಯೇಯ, ಗುರಿ, ಉದ್ದೇಶ ಬದಲಾಗಿದೆ. ನಮ್ಮ ಪಕ್ಷದ ಕಾರ್ಯಕರ್ತನೆ ನಮ್ಮ ಆಸ್ಥಿ ಎಂದರು. ವಿವಿಧ ಪಕ್ಷಗಳಿಗಿಂತ ನಮ್ಮ ಪಕ್ಷ ವಿಭಿನ್ನವಾಗಿದೆ. ಇಲ್ಲಿ ಸಾಮಾನ್ಯ ಪಂಚಾಯತ ಸದಸ್ಯನನ್ನು ರಾಜ್ಯ ಸಭಾ ಸದಸ್ಯನನ್ನಾಗಿ ಮಾಡುವ ಗುರಿ ಇದೆ ಎಂದರು.

ನಮ್ಮ ಪಕ್ಷದಲ್ಲಿ ಗ್ರಾಮ ಪಂಚಾಯತ ಸದಸ್ಯರು ಹಲವಾರು ಜನರು ರಾಜ್ಯ ಸಭಾ ಸದಸ್ಯರಾಗಿದ್ದಾರೆ. ಹೀಗಾಗಿ ಕೆಳಮಟ್ಟದ ಕಾರ್ಯಕರ್ತನಿಗೆ ಯಾವ ರೀತಿಯಲ್ಲಿಯೂ ವಂಚಿತ ಮಾಡದೇ ನ್ಯಾಯ ನೀಡುವ ಪಕ್ಷದ ಮೂಲ ಉದ್ದೇಶವಾಗಿದೆ ಎಂದರು. ಒಂದು ಸಮಯದಲ್ಲಿ 2 ಸ್ಥಾನವಿದ್ದಂತಹ ಪಕ್ಷ ಇದೀಗ 303 ಸ್ಥಾನಗಳಲ್ಲಿ ಗೆದ್ದು, ದೇಶದಲ್ಲಿ ಆಡಳಿತ ನಡೆಸುತ್ತಿದೆ. ಈ ಆಡಳಿತಕ್ಕೆ ಮೂಲ ಕಾರಣವೇ ನಮ್ಮ ಕಾರ್ಯಕರ್ತನ ಪರಿಶ್ರಮ ಎಂದರು.

ಹೀಗಾಗಿ ಜಿಲ್ಲೆಯ ಸಂಸದರು, ಶಾಸಕರು ಹಾಗೂ ಪದಾಧಿಕಾರಿಗಳು ನಮ್ಮ ಕಾರ್ಯಕರ್ತನ ಹೆಗಲಿಗೆ ಹೆಗಲು ಕೊಟ್ಟು ಗ್ರಾಮ ಪಂಚಾಯತ ಚುನಾವಣೆಯಲ್ಲಿ ಗೆಲ್ಲಿಸಿ ಅವರನ್ನು ನಾಯಕನನ್ನಾಗಿ ಮಾಡುವ ಹೊಣೆ ನಮ್ಮ ಮೇಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss