Sunday, April 11, 2021

Latest Posts

ಗ್ರಾಹಕರ ಮೊಬೈಲ್ ಗೆ ಸ್ಟೇಟಸ್ ಕಳುಹಿಸಿ, ಅಲ್ಲಲ್ಲ… ಹಂಗಲ್ಲ… ಅಂದಿತು WhatsApp

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬಳಕೆದಾರರ ಗೌಪ್ಯತಾ ನೀತಿಯಲ್ಲಿ ಬದಲಾವಣೆ ಮಾಡುವುದಾಗಿ ಹೇಳಿದ್ದ ವಾಟ್ಸಪ್ ಇದೀಗ ಬಳಕೆದಾರರಿಗೆ ಸ್ಟೇಟಸ್ ಕಳಿಸುವ ಮೂಲಕ ಬಳಕೆದಾರರ ಗೌಪ್ಯತಾ ನೀತಿಯನ್ನು ನಾವು ರಕ್ಷಿಸುವುದಾಗಿ ಹೇಳಿಕೊಂಡಿದೆ.
ಭಾನುವಾರ ಬಳಕೆದಾರರು ವಾಟ್ಸಪ್​ ಸ್ಟೇಟಸ್​ಗಳನ್ನು ನೋಡುವ ವೇಳೆ, ಮೊದಲ ಸ್ಥಾನದಲ್ಲಿ ವಾಟ್ಸಪ್​ ತನ್ನ ನಾಲ್ಕು ಸ್ಟೇಟಸ್​ಗಳನ್ನು ಹಂಚಿಕೊಂಡಿದ್ದು, ಈ ಮೂಲಕ ಬಳಕೆದಾರರ ಗೌಪ್ಯತೆಗೆ ಸಂಬಂಧಿಸಿದಂತೆ ಇರುವ ಅನುಮಾನಗಳನ್ನು ನಿವಾರಿಸಲು ಹಾಗು ಜನರಿಗೆ ಮನವರಿಕೆ ಮಾಡಲು ಯತ್ನಿಸಿದೆ.
ವಾಟ್ಸಪ್ ತನ್ನ ಬಳಕೆದಾರರ ಜೊತೆಗೆ ಹಂಚಿಕೊಂಡಿರುವ ನಾಲ್ಕು ಸ್ಟೇಟಸ್​ಗಳು ಇಂತಿವೆ.

ನಾವು ನಿಮ್ಮ ಗೌಪ್ಯತೆ ರಕ್ಷಿಸಲು ಬದ್ಧರಾಗಿದ್ದೇವೆ.

ನಿಮ್ಮ ವೈಯಕ್ತಿಕ ಸಂಭಾಷಣೆಯನ್ನು ವಾಟ್ಸಪ್ ಓದಲು ಸಾಧ್ಯವಿಲ್ಲ.

ನೀವು ಹಂಚಿಕೊಂಡ ಸ್ಥಳವನ್ನು ವಾಟ್ಸಪ್ ನೋಡುವುದಿಲ್ಲ.

ನಿಮ್ಮ ಸಂಪರ್ಕಗಳನ್ನು ಫೇಸ್​ಬುಕ್​ನೊಂದಿಗೆ ಹಂಚಿಕೊಳ್ಳುವುದಿಲ್ಲ.

ಈ ರೀತಿಯ ನಾಲ್ಕು ಸ್ಟೇಟಸ್​ಗಳನ್ನು ವಾಟ್ಸಪ್​ ತನ್ನ ಬಳಕೆದಾರರೊಂದಿಗೆ ಹಂಚಿಕೊಂಡಿದ್ದು, ಈ ಮೂಲಕ ತನ್ನ ಬಳಕೆದಾರರ ವಿಶ್ವಾಸವನ್ನು ಮರಳಿಪಡೆಯಲು ಪ್ರಯತ್ನಸುತ್ತಿದೆ.
ಕಳೆದ ವಾರ ವಾಟ್ಸಪ್​ ಸೇವಾ ನಿಯಮಗಳು ಮತ್ತು ಸಾರ್ವಜನಿಕ ಗೌಪ್ಯತೆ ವಿಚಾರದಲ್ಲಿ ಬದಲಾವಣೆ ತರುವುದಾಗಿ ಹೇಳಿತ್ತು. ಇದಕ್ಕೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಬಳೆಕೆದಾರರರು ಟೆಲಿಗ್ರಾಮ್, ಸಿಗ್ನಲ್ ಮುಂತಾದ ಮೆಸೇಜಿಂಗ್ ಆ್ಯಪ್​ಗಳಿಗೆ ಪಲಾಯನವಾಗುತ್ತಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss