ಹೊಸದಿಗಂತ ವರದಿ,ಬಾಗಲಕೋಟೆ:
ಗ್ರಾಮ ಪಂಚಾಯ್ತಿ ಚುನಾವಣೆ ಪ್ರಚಾರ ಈಗ ಶುರುವಾಗಿದ್ದು ಮೊದಲ ಹಂತದ ಚುನಾವಣೆ ಪ್ರಚಾರದ ಕಾವು ತೀವ್ರಗೊಂಡಿದ್ದು ಕಿರುತೆರೆ ಕಲಾವಿದೆ ಈಗ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಜಿಲ್ಲೆಗೆ ಆಗಮಿಸಿದ್ದಾರೆ.
ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಿರಿಸಾಗರ ಗ್ರಾಮದಲ್ಲಿ ಪುಟ್ಟ ಗೌರಿ ಧಾರಾವಾಹಿ ಕಲಾವಿದೆ ರಂಜನಿ ರಾಘವನ್ ಅವರು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧೆ ಮಾಡಿರುವ ಕಲಾವಿದರನ್ನು ಬೆಂಬಲಿಸುವಂತೆ ಪ್ರಚಾರ ಆಗಮಿಸಿದಾಗ ಗ್ರಾಮಸ್ಥರು ಭವ್ಯ ಸ್ವಾಗತ ನೀಡಿದರು.
ಚುನಾವಣಾ ಆಯೋಗ ಐದು ಜನರಿಗೆ ಪ್ರಚಾರಕ್ಕೆ ಅವಕಾಶ ಕೊಟ್ಟರೂ ಆದರೆ ಈಗ ಅದೆಲ್ಲ ತಲೆಕೆಡಿಸಿಕೊಳ್ಳದ ಅಭ್ಯರ್ಥಿಗಳು ತಾರೆಯರನ್ನು ಕರೆಸಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಗಿರಿಸಾಗರ ಗ್ರಾಮದ ವಿಜಯಲಕ್ಷ್ಮೀ ಹೂಗಾರ, ವೆಂಕಪ್ಪ ನುಚ್ಚಿನ್, ಬಿ.ಎನ್. ಮೇತ್ರಿ ಅವರ ಪರ ಧಾರಾವಾಹಿ ಕಲಾವಿದೆ ರಂಜನಿ ರಾಘವನ್ ಪ್ರಚಾರ ನಡೆಸಿದರು.