ಹೊಸದಿಗಂತ ವರದಿ,ತುಮಕೂರು:
ರಾಜ್ಯದಲ್ಲಿ ಗ್ರಾಮಪಂಚಾಯಿತಿಗಳ ಫಲಿತಾಂಶಗಳು ಕಾಂಗ್ರೆಸ್ ಪಕ್ಷದ ಪತನದ ಸಂಕೇತ ಎಂದು ಸಮಾಜ ಕಲ್ಯಾಣ ಸಚಿವ ಶ್ರೀ ರಾಮುಲು ಹೇಳಿದರು.
ತುಮಕೂರಿನಲ್ಲಿ ಜನಸೇವಕ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ವರ್ತನೆಯಿಂದ ಬಗ್ಗೆ ಅವರನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ಬಜೆಟ್ ನಲ್ಲಿ ಯುವಕರ ಅಭಿವೃದ್ಧಿಗೆ ಸಹಕಾರಿಯುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಇದುವರೆಗೆ ರಾಷ್ಟ್ರದಲ್ಲಿ ಆಗಿಹೋದ ಪ್ರಧಾನಮಂತ್ರಿಗಳಲ್ಲಿ ದೇಶದ ಅಭಿವೃದ್ಧಿಗೆ ಕೆಲಸ ಮಾಡಿದ ಪ್ರಧಾನ ಮಂತ್ರಿ ಎಂದರೆ ಅಟಲ್ ಬಿಹಾರಿ ವಾಜಪೇಯಿ ಅವರು ಅವರ ನಂತರ ನರೇಂದ್ರ ಮೋದಿ ಅವರು ಎಂದರು.
ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಟಾಟಾ -ಬಿರ್ಲಾ -ಅಂಬಾನಿಯಂ ತಹ ಉದ್ಯಮಿಗಳು ಹಣಕೊಡಲು ಮುಂದೆ ಬಂದರೂ ಜನರ ದೇಣಿಗೆಯಿಂದಲೇ ಮಂದಿರ ನಿರ್ಮಾಣವಾಗಬೇಕು ಎಂದವರು ಪ್ರಧಾನ ಮಂತ್ರಿಯವರು ಹೇಳಿದರು ಎಂದರು.
ಗ್ರಾಮಪಂಚಾಯಿತಿಗಳ ಅಧ್ಯಕ್ಷರಿಗೆ ಚೆಕ್ ಸಹಿಮಾಡುವ ಅಧಿಕಾರವಿದೆ.ಆದ್ದರಿಂದ ಅವರು ಎಚ್ಚರಿಕೆ ಯಿಂದ ಇರಬೇಕು. ಇಲ್ಲದೇ ಇದ್ದರೆ ಅವರು ದಾರಿ ತಪ್ಪಿಸುತ್ತಾರೆ ಎಂದರು.