ಹೊಸದಿಗಂತ ವರದಿ,ಮೈಸೂರು:
ಜಿಲ್ಲೆಯಲ್ಲಿ ನಡೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಮಂಗಳಮುಖಿಯೊಬ್ಬರು ಗೆಲುವು ಸಾಧಿಸಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಯ 7ನೇ ಬ್ಲಾಕ್ ನ ನಿವಾಸಿ ಮಂಗಳಮುಖಿ ದೇವಿಕಾ ಅವರು 110 ಮತಗಳನ್ನು ಪಡೆದುಕೊಂಡಿದ್ದು, 5 ಮತಗಳ ಅಂತರದಲ್ಲಿ ವಿಜಯ ಸಾಧಿಸಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ದೇವಿಕಾ ಅವರು, ತಮ್ಮ ಪ್ರತಿಸ್ಪರ್ಧಿ ಯಶೋಧ ಅವರನ್ನು 5 ಮತಗಳ ಅಂತರದಿoದ ಸೋಲಿಸಿದ್ದಾರೆ.