Tuesday, July 5, 2022

Latest Posts

ಗ್ರಾ.ಪಂ. ಚುನಾವಣೆಯಿಂದ ಹಿಂದೆ ಸರಿಯಲು ಎದುರಾಳಿ ಅಭ್ಯರ್ಥಿಯಿಂದ ಪಿಸ್ತೂಲ್ ತೋರಿಸಿ ಬೆದರಿಕೆ

ಹೊಸ ದಿಗಂತ ವರದಿ, ಕಲಬುರಗಿ:

ಗ್ರಾ.ಪಂ. ಚುನಾವಣೆಯಿಂದ ಹಿಂದೆ ಸರಿಯುವಂತೆ ಅಭ್ಯರ್ಥಿ ಮಹಾಲಕ್ಷ್ಮಿಯವರ ಪತಿ ಶರಣಪ್ಪ ಪೂಜಾರಿಗೆ ಎದುರಾಳಿ ಅಭ್ಯರ್ಥಿ ಪಿಸ್ತೂಲ್​ನಿಂದ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಚನ್ನೂರ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಮಹಾಲಕ್ಷ್ಮಿ ಪೂಜಾರಿ ಅವರನ್ನು ಕಣದಿಂದ ಹಿಂದೆ ಸರಿಸುವಂತೆ ಅವರ ಪತಿ ಶರಣಪ್ಪ ಪೂಜಾರಿಗೆ, ಎದುರಾಳಿ ಅಭ್ಯರ್ಥಿ ಬೀರಲಿಂಗ ಪೂಜಾರಿ ಎಂಬುವವರು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ‌.
ಬೀರಲಿಂಗ ಪೂಜಾರಿ ತನ್ನ ಸಹಚರರೊಂದಿಗೆ ಕಾರಿನಲ್ಲಿ ಪಂಚಾಯಿತಿಗೆ ಕರೆದುಕೊಂಡು ಹೋಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗ್ತಿದೆ. ಒಂದು ವೇಳೆ ನಾಮಪತ್ರ ವಾಪಸ್ ಪಡೆಯದೆ ಹೋದ್ರೆ, ನಿನ್ನ ಮನೆ ಬಳಿ ನಮ್ಮವರು ಇದ್ದಾರೆ. ನಿನ್ನ ಹೆಂಡತಿಯನ್ನ ಬಿಡೋದಿಲ್ಲ ಎಂಬ ಬೆದರಿಕೆ ಹಾಕಿರುವ ಹಿನ್ನೆಲೆ ಹೆಂಡತಿಯ ನಾಮಪತ್ರಕ್ಕೆ ಸೂಚಕರಾಗಿದ್ದ ಶರಣಪ್ಪ ಪೂಜಾರಿ ನಾಮಪತ್ರ ಹಿಂಪಡೆದಿದ್ದಾರೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss