Tuesday, June 28, 2022

Latest Posts

ಗ್ರಾ.ಪಂ. ಚುನಾವಣೆಯ ಮತ ಎಣಿಕೆ ಕಾರ್ಯ ಹೇಗೆ ನಡೆಯತ್ತದೆ? ಸದಸ್ಯರ ಆಯ್ಕೆ ಹೇಗೆ? ಮಾಹಿತಿ ಇಲ್ಲಿದೆ

ಹೊಸದಿಗಂತ ವರದಿ,ಉಡುಪಿ:

ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದೆ. ಆದರೆ ಇಲ್ಲಿ ಉಳಿದ ಚುನಾವಣೆಗಳಂತೆ ಅತೀ ಹೆಚ್ಚು ಮತ ಗಳಿಸಿದವರಷ್ಟೇ ಗೆಲ್ಲುವುದಿಲ್ಲ. ಎರಡನೇ ಅತೀ ಹೆಚ್ಚು ಮತಗಳಿಸಿದವರೂ ಸದಸ್ಯರಾಗಬಹುದು.

ಗ್ರಾ.ಪಂ. ಚುನಾವಣೆಯ ಮತ ಎಣಿಕೆ ಕಾರ್ಯ ಹೇಗೆ ನಡೆಯತ್ತದೆ, ವಿಜಯಶಾಲಿಯನ್ನು ಆಯ್ಕೆ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಮಹಿಳಾ ಮೀಸಲಾತಿಗಿದೆ ಗರಿಷ್ಠ 4ಅವಕಾಶ: ಪಂಚಾಯತ್‌ನ ವಾರ್ಡೊಂದರಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಸದಸ್ಯ ಸ್ಥಾನಗಳಿದ್ದರೆ, ಮಹಿಳಾ ಮೀಸಲಾತಿಗೆ ಗೆಲುವಿಗೆ ಹೆಚ್ಚಿನ ಅವಕಾಶಗಳಿವೆ. ಮಹಿಳಾ ಮೀಸಲಾತಿಗೆ ಗೆಲ್ಲಲು ಗರಿಷ್ಠ ನಾಲ್ಕು ಅವಕಾಶಗಳು ಲಭಿಸುತ್ತವೆ. ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ ಎ ಮತ್ತು ಹಿಂದುಳಿದ ವರ್ಗ ಬಿಯಲ್ಲಿ ಮಹಿಳಾ ಮೀಸಲಾತಿ ಇದ್ದರೆ ಅಭ್ಯರ್ಥಿಗಳು ಅದೇ ವರ್ಗದಲ್ಲಿ, ನಂತರ ಮಹಿಳಾ ಮೀಸಲಾತಿಯಲ್ಲಿ ಮತ್ತು ಕೊನೆಯದಾಗಿ ಸಾಮಾನ್ಯ ವರ್ಗದಲ್ಲಿಯೂ ಸ್ಪರ್ಧೆಗೆ ಅರ್ಹರಿರುತ್ತಾರೆ. ಮೀಸಲಾತಿಯಲ್ಲಿ ಪುರುಷರಿಗೆ ಎರಡು ಅವಕಾಶಗಳು ಸಿಕ್ಕರೆ, ಸಾಮಾನ್ಯ ಅಭ್ಯರ್ಥಿಗೆ ಮಾತ್ರ ಒಂದೇ ಅವಕಾಶವಿದೆ.

ಸಾಮಾನ್ಯ ಅಭ್ಯರ್ಥಿಗೆ ಬೇಕು 2ನೇ ಹೆಚ್ಚು ಮತ: ಮೀಸಲಾತಿಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ ಒಬ್ಬರು ಗರಿಷ್ಠ ಮತಗಳನ್ನು ಪಡೆದು ವಿಜಯಶಾಲಿಯಾಗುತ್ತಾರೆ. ಎರಡನೇ ಗರಿಷ್ಠ ಮತಗಳ ಗಳಿಸಿರುವ ಅಭ್ಯರ್ಥಿಯು ಅಲ್ಲಿನ ಇತರ ಕ್ಷೇತ್ರಗಳಲ್ಲಿಯೂ ಸ್ಪರ್ಧೆಗೆ ಅರ್ಹರಾಗಿರುತ್ತಾರೆ. ಸಾಮಾನ್ಯ ಸ್ಥಾನದಲ್ಲಿ ಸಾಮಾನ್ಯ ಅಭ್ಯರ್ಥಿ ಗೆಲುವು ಸಾಧಿಸಬೇಕಾದರೆ ಎರಡನೇ ಅತೀ ಹೆಚ್ಚು ಮತಗಳನ್ನು ಪಡೆದಿರಬೇಕು. ಒಂದು ವೇಳೆ ಅದರಲ್ಲಿ ವಿಫಲರಾದರೆ ಆ ಸ್ಥಾನಕ್ಕೆ ಸಾಮಾನ್ಯ ಅಭ್ಯರ್ಥಿ ಆಯ್ಕೆಯಾಗದೇ ಗರಿಷ್ಠ ಮತಗಳನ್ನು ಗಳಿಸಿದ ಮೀಸಲಾತಿ ಅಭ್ಯರ್ಥಿ ಆಯ್ಕೆಯಾಗುತ್ತಾರೆ.

ಗ್ರಾಮ ಪಂಚಾಯತ್ ಚುನಾವಣೆ ಮತ ಎಣಿಕೆಯು ಕುತೂಹಲಕಾರಿಯಾಗಿದೆ. ಈಗಾಗಲೇ ಕೆಲ ಮೀಸಲಾತಿ ಅಭ್ಯರ್ಥಿಗಳು ಈ ವಿಶೇಷ ಅವಕಾಶದಿಂದ ಸದಸ್ಯರಾಗಿ ಆಯ್ಕೆಯಾದರೆ, ಸಾಮಾನ್ಯ ಅಭ್ಯರ್ಥಿಗಳು ಸೋಲುಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss