Friday, July 1, 2022

Latest Posts

ಗ್ರಾ.ಪಂ ಚುನಾವಣೆ: ಎರಡು ಕೈಗಳಿಲ್ಲದ ವ್ಯಕ್ತಿಯಿಂದ ಮತದಾನ!

ಹೊಸದಿಗಂತ ವರದಿ, ಮೈಸೂರು:

ಜಿಲ್ಲೆಯಲ್ಲಿ ಭಾನುವಾರ ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎರಡು ಕೈಗಳು ಇಲ್ಲದ ವ್ಯಕ್ತಿಯೊಬ್ಬರು ಮತದಾನ ಮಾಡಿದ್ದಾರೆ.

ಎರಡು ಕೈಗಳನ್ನು ಕಳೆದುಕೊಂಡಿದ್ದರೂ ಉತ್ಸಾಹದಿಂದ ಸೈಕಲ್‌ನಲ್ಲಿ ಮತಗಟ್ಟೆಗೆ ಬಂದ ರಂಗಸಮುದ್ರ ಗ್ರಾಮದ ನಿವಾಸಿ 60ವರ್ಷದ ನೂರ್ ಹಫೀಜ್ ಮತದಾನ ಮಾಡಿದರು. 45 ವರ್ಷದ ಹಿಂದೆ ತನ್ನ ಎರಡೂ ಕೈ ಕಳೆದುಕೊಂಡಿರುವ ನೂರ್ ಹಫೀಜ್, ಯಾರ ಸಹಾಯವೂ ಇಲ್ಲದೆ ಸೈಕಲ್ ಮೂಲಕ ಮತಗಟ್ಟೆಗೆ ಬಂದು ತನ್ನ ಹಕ್ಕು ಚಲಾಯಿಸಿ, ರಂಗ ಸಮುದ್ರ ನಿವಾಸಿಗಳಿಗೆ ಮಾದರಿಯಾದರು.

ಹಫೀಜ್, ಪ್ರತಿ ಚುನಾವಣೆಯಲ್ಲೂ ಉತ್ಸಾಹದಿಂದಲೇ ಮತದಾನ ಮಾಡ್ತಾರೆ. ‘ಮತ ಚಲಾಯಿಸಲ್ಲ ಅಂದ್ರೆ ಸತ್ತಂತೆ. ನಮ್ಮ ಹಕ್ಕು ಚಲಾಯಿಸುವುದು ನಮ್ಮ ಕರ್ತವ್ಯ’ ಎಂದು ಹೇಳುತ್ತಾರೆ ಹಫೀಜ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss