ಹೊಸದಿಗಂತ ವರದಿ, ತುಮಕೂರು:
ಗ್ರಾಮಪಂಚಾಯಿತಿ ಸದಸ್ಯರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕೇ ವಿನಹ ಅಧಿಕಾರಿಗಳ ಜೊತೆಯಲ್ಲಿ ವೈಮನಸ್ಯಗಳಿಗೆ ಅವಕಾಶ ಮಾಡಿಕೊಳ್ಳಬಾರದು ಎಂದು ನೂತನ ಗ್ರಾಮಪಂಚಾಯಿತಿಯ ಸದಸ್ಯರಿಗೆ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರು ಕಿವಿಮಾತು ಹೇಳಿದರು.
ತುಮಕೂರಿನಲ್ಲಿ ಜನಸೇವಕ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಅಭಿವೃದ್ದಿ ದ್ವೇಷಾಸೂಯೆಗಳಿಗೆ ಅವಕಾಶಮಾಡಿಕೊಡಬಾರದು.ಹೊಂದಾಣಿಕೆಯಿಂದ ಕೆಲಸ ಮಾಡುವಂತೆ ಸಲಹೆ ಮಾಡಿದರು.ಅಧಿಕಾರದ ಅಮಲನ್ನು ತಲೆಗೆ ಹತ್ತಿಸಿಕೊಳ್ಳದೆ ನಿಜವಾದ ಜನಸೇವಕ ರಾಗುವಂತೆ ಸಲಹೆ ಮಾಡಿದರು.
ಕಳೆದ 70ವರ್ಷಗಳು ಆಡಳಿತ ನಡೆಸಿದವರಿಂದ ಆಗದ ಅಭಿ ವೃದ್ಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರು ವರ್ಷಗಳಲ್ಲಿ ಮಾಡಿದ್ದಾರೆ ಎಂದರು. ಉತ್ತಮ ಆಡಳಿತ ನೀಡುವ ಮೂಲಕ ಕಾಂಗ್ರೆಸ್ ಆಡಳಿತಕ್ಕೆ ಇತಿಶ್ರೀ ಹಾಡಲು ನೂತನ ಬಿಜೆಪಿ ಸದಸ್ಯರಿಗೆ ಉಪಮುಖ್ಯಮಂತ್ರಿಯವರು ಸಲಹೆ ಮಾಡಿದರು.