ಅಥೆನ್ಸ್: ಗ್ರೀಸ್ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಹಿಳೆಯೋರ್ವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ಗ್ರೀಸ್ ಸಂಸತ್ ನಲ್ಲಿ ನಡೆದ ಚುನಾವಣೆಯಲ್ಲಿ 63 ವರ್ಷದ ಕ್ಯಾಟರಿನಾ ಸಕಲೊರಾಪುಲು 261 ಮತಗಳನ್ನು ಪಡೆದು ಅಧ್ಯಕ್ಷ ಹುದ್ದೆಗೇರಿದರು.
ಗ್ರೀಸ್ ನ ಅತ್ಯುನ್ನತ ಆಡಳಿತಾತ್ಮಕ ನ್ಯಾಯಮಂಡಳಿ ಆಗಿರುವ ಕೌನ್ಸಿಲ್ ಆಫ್ ಸ್ಟೇಟ್ ನ ಮುಖ್ಯಸ್ಥರಾಗಿರುವ ಕ್ಯಾಟರಿನಾ ಸಾಂವಿಧಾನಿಕ ಕಾನೂನು ಮತ್ತು ಪರಿಸರ ವಿಷಯಗಳಲ್ಲಿ ತಜ್ಞರಾಗಿದ್ದಾರೆ.
ನೂತನ ಅಧ್ಯಕ್ಷೆ ಮಾ.13ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.