ಹೊಸ ದಿಗಂತ ಆನ್ ಲೈನ್ ಡೆಸ್ಕ್ :
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣಾ ಅಖಾಡಕ್ಕೆ ಸಜ್ಜಾಗುತ್ತಿರುವ ಬಿಜೆಪಿ, ಚುನಾವಣಾ ಸಹ ಉಸ್ತುವಾರಿಯನ್ನಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರನ್ನು ನೇಮಕ ಮಾಡಿದೆ.
ಭೂಪೇಂದ್ರ ಯಾದವ್ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಡಾ.ಸುಧಾಕರ್, ಆಶಿಶ್ ಶಿಲ್ಲರ್, ಪ್ರದೀಪ್ ಸಿಂಗ್, ಸತೀಶ್ ರೆಡ್ಡಿ ಅವರನ್ನು ಸಹ ಉಸ್ತುವಾರಿಗಳನ್ನಾಗಿ ನೇಮಕಗೊಳಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಆದೇಶಿಸಿದ್ದಾರೆ.
ಈಗಾಗಲೇ ಮಹಾರಾಷ್ಟ್ರ, ತಮಿಳುನಾಡು, ಗೋವಾ ರಾಜ್ಯದ ಉಸ್ತುವಾರಿ ಸ್ಥಾನ ಸಿ.ಟಿ ರವಿಗೆ, ಪಾಂಡಿಚೇರಿ ಉಸ್ತುವಾರಿಯನ್ನಾಗಿ ನಿರ್ಮಲ್ ಕುಮಾರ್ ಸುರಾನಾ , ಕೇರಳ ರಾಜ್ಯದ ಸಹ ಉಸ್ತುವಾರಿಯಾಗಿ ಶಾಸಕ ಸುನೀಲ್ ಕುಮಾರ್ ಅವರನ್ನು ನೇಮಕ ಮಾಡಲಾಗಿತ್ತು. ಅದರ ಜೊತೆಗೆ ಈಗ ಮತ್ತೆ ರಾಜ್ಯದ ಒಬ್ಬರಿಗೆ ನೆರೆ ರಾಜ್ಯದ ಚುನಾವಣಾ ಉಸ್ತುವಾರಿ ತಂಡದ ಸ್ಥಾನ ಕಲ್ಪಿಸಲಾಗಿದೆ.