Sunday, August 14, 2022

Latest Posts

ಘಾಟಹಿಪ್ಪರಗಾ ಮತ್ತು ಇಲ್ಲಾಳದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ರೈತ ಸಂಘದಿಂದ ಒತ್ತಾಯ

ಬೀದರ: ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರಗಾ ಮತ್ತು ಇಲ್ಲಾಳ ಗ್ರಾಮಗಳಲ್ಲಿ ಕುಡಿಯುವ ನೀರು ಶುದ್ಧೀಕರಣ ಘಟಕಗಳು ಇಲ್ಲದ ಕಾರಣ ಈ ಗ್ರಾಮಗಳ ಮಹಿಳೆಯರು ಬೇರೆ ಊರಿಗೆ ಹೋಗಿ ಕುಡಿಯುವ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಕೂಡಲೇ ಘಾಟಹಿಪ್ಪರಗಾ ಮತ್ತು ಇಲ್ಲಾಳ ಗ್ರಾಮಗಳಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡಬೇಕು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ನಿಶಾನೆ ಬೀದರ ಜಿಲ್ಲಾ ಘಟಕದಂದ ಮನವಿ ಪತ್ರ ಸಲ್ಲಿಸಲಾಗಿದೆ.

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರಗಾ ಮತ್ತು ಇಲ್ಲಾಳ ಗ್ರಾಮದಲ್ಲಿ ಕುಡಿಯುವ ನೀರು ಶುದ್ಧಿಕರಣ ಘಟಕ ಇಲ್ಲದ ಕಾರಣ ಗ್ರಾಮದ ಮಹಿಳೆಯರು ಬೇರೆ ಊರುಗಳಿಗೆ ಹೋಗಿ ನೀರು ತೆಗೆದುಕೊಂಡು ಬರುವಂತಾಗಿದೆ. ರಾಜ್ಯ ಸರ್ಕಾರ ಶೀಘ್ರವೇ ಘಾಟಹಿಪ್ಪರಗಾ ಮತ್ತು ಇಲ್ಲಾಳ ಗ್ರಾಮಗಳಲ್ಲಿ ಕುಡಿಯುವ ನೀರು ಶುದ್ದೀಕರಣ ಘಟಕಗಳು ಸ್ಥಾಪನೆ ಮಾಡಿ, ಮಹಿಳೆಯರಿಗಾಗುತ್ತಿರುವ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಮುಖ್ಯಮಂತ್ರಿಗಳು ತಕ್ಷಣವೇ ಘಾಟಹಿಪ್ಪರಗಾ ಮತ್ತು ಇಲ್ಲಾಳ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಹಾಗೂ ಜನರಿಗೆ ಶುದ್ಧ ಕುಡಿಯುವ ನೀರು ಜವಾಬ್ದಾರಿ ಸರ್ಕಾರದ ಆದ್ಯಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಹೇಳಲಾಗಿದೆ.

ರಾಜ್ಯ ಸರ್ಕಾರ ಘಾಟಹಿಪ್ಪರಗಾ ಮತ್ತು ಇಲ್ಲಾಳ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡದಿದ್ದಲ್ಲಿ ಗ್ರಾಮ ಪಂಚಾಯತ ಮತ್ತು ಬಸವಕಲ್ಯಾಣ ತಾಲೂಕಾ ಪಂಚಾಯತ ಕಚೇರಿಗಳ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ನಿಶಾನೆ ಬೀದರ ಜಿಲ್ಲಾ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ, ಬಸವಕಲ್ಯಾಣ ತಾಲೂಕಿನ ಅಧ್ಯಕ್ಷರಾದ ರುದ್ರ ಸ್ವಾಮಿ, ಉಪಾಧ್ಯಕ್ಷರಾದ ಸಂತೋಷ ಗುದಗೆ, ರೈತ ಸಂಘದ ಮಹಿಳಾ ಪ್ರಮುಖರಾದ ಜಗದೇವಿ ವಾಗಜೆ, ಮಹಾನಂದಾ ಹಂಡಗೆ, ಪಾರ್ವತಿ, ಶರಣಮ್ಮಾ, ಗಂಜಮ್ಮಾ, ಚಂಪಾಬಾಯಿ, ಸುಶೀಲಾಬಾಯಿ ಮತ್ತು ತಂಗೆಮ್ಮಾ ಬೇಲೂರೆ ಸೇರಿದಂತೆ ನೂರಾರು ರೈತರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss