ಶುಂಠಿ ಅಡುಗೆಗೆ ಹಾಕಿದರೆ ಅದರ ರುಚಿಯೇ ಬೇರೆ. ಹಾಗೆಯೇ ಆರೋಗ್ಯದಲ್ಲಿಯೂ ಶುಂಠಿ ಬಹಳ ಉಪಕಾರಿ. ಪ್ರತಿ ದಿನ ಶುಂಠಿಯನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು. ಶುಂಠಿಯಿಂದ ಆಗುವಂತಹ ಆರೋಗ್ಯಕರ ಬದಲಾವಣೆಗಳು ಇಲ್ಲಿವೆ ನೋಡಿ.
ಗ್ಯಾಸ್ ಸಮಸ್ಯೆಗೆ:
ಗ್ಯಾಸ್ ಸಮಸ್ಯೆ ಇದ್ದರೆ ಹೊಟ್ಟೆನೋವು ಬರುತ್ತದೆ. ಉಸಿರಾಟಕ್ಕೆ ಸಂಬಂಧಿಸಿದಂತೆ ತೊಂದರೆ ಆಗುತ್ತದೆ. ಅಂತಹ ಸಮಯದಲ್ಲಿ ಚಿಕ್ಕ ಚಿಕ್ಕ ಶುಂಠಿಯನ್ನು ಉಪ್ಪಿನ ಜತೆ ಸೇರಿಸಿಕೊಂಡು ಸೇವಿಸಿದರೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.
ಹಸಿವು :
ಒಮ್ಮೊಮ್ಮೆ ತುಂಬಾ ತಿನ್ನಬೇಕೆನಿಸುತ್ತದೆ ಆದರೆ ಹಸಿವು ಇರುವುದಿಲ್ಲ ಹಾಗಿದ್ದಲ್ಲಿ ಶುಂಠಿ ಕಶಾಯವನ್ನು ಸೇವಿಸಿ. ಶುಂಠಿ, ಉಪ್ಪು ಹಾಕಿ ನೀರಿನಲ್ಲಿ ಕುದಿಸಿಕೊಂಡು ಅದಕ್ಕೆ ಲಿಂಬು ರಸ ಹಿಂಡಿಕೊಂಡು ಸೇವಿಸಿದರೆ ಹಸಿವು ಬೇಗ ಆಗುತ್ತದೆ.
ಕೆಮ್ಮು, ಕಫ, ನೆಗಡಿ:
ಕೆಮ್ಮು, ಕಫ, ನೆಗಡಿ ಇದ್ದಾಗ ಶುಂಠಿಯನ್ನು ಜೇನುತುಪ್ಪದಲ್ಲಿ ತೇಯ್ದು ಅದಕ್ಕೆ ತುಳಸಿ ರಸವನ್ನೂ ಸೇರಿಸಿ ಕುಡಿದರೆ ಕೆಮ್ಮು, ಕಫ, ನೆಗಡಿ ಗುಣವಾಗುತ್ತದೆ.
ಮೂತ್ರ ಸೋಂಕು:
ಮೂತ್ರದಲ್ಲಿ ಸೋಂಕು ಕಾಣಿಸಿಕೊಂಡಾಗ ಉರಿ ಮೂತ್ರ ಪ್ರಾರಂಭವಾಗುತ್ತದೆ.ಅಂಥ ಸಮಯದಲ್ಲಿ ಹಾಲು,ಸಕ್ಕರೆಗೆ ಶುಂಠಿ ಪುಡಿಯನ್ನು ಮಿಶ್ರಣ ಮಾಡಿಕೊಂಡು ಸೇವಿಸಿರಿ. ಇದರಿಂದ ಮೂತ್ರದ ಸೋಂಕು ನಿವಾರಣೆಯಾಗುತ್ತದೆ.
ಮೂರ್ಚೆ ಕಾಯಿಲೆ:
ಶುಂಠಿ ರಸವನ್ನು ಮೂಗಿನಲ್ಲಿ ಬಿಡುವುದರಿಂದ ಮೂರ್ಚೆಬೀಳುವ ಕಾಯಿಲೆಗುಣವಾಗುತ್ತದೆ. ಮೂರ್ಚೆ ಬಿದ್ದಾಗ ಒಂದೇ ಅಲ್ಲದೇ ಆಗಾಗ ಬಿಡುತ್ತಿರುವುದು ಒಳ್ಳೆಯದು.
ಹಲ್ಲು ನೋವು:
ಹಲ್ಲು ನೋವು ಇರುವವರು ಶುಂಠಿ ರಸವನ್ನು ತೆಗೆದು ಆ ರಸದಲ್ಲಿ ಹತ್ತಿಯನ್ನು ಅದ್ದಿ ನೋವಿರುವ ಜಾಗದಲ್ಲಿ ಇಟ್ಟು ಕೊಂಡರೆ ಒಳ್ಳೆಯದು. ಹಲ್ಲುನೋವು ಹೋಗುತ್ತದೆ.
ಪಿತ್ತನಿವಾರಣೆ:
ಬೆಳಿಗ್ಗೆ ಎದ್ದಿದ್ದೆ ಹಸಿದ ಹೊಟ್ಟೆಯಲ್ಲಿ ಹಸಿ ಶುಂಠಿಯನ್ನು ಜಗಿದು ರಸ ಸೇವಿಸಬೇಕು.ನಂತರ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಇದರಿಂದ ಪಿತ್ತದ ಸಮಸ್ಯೆ ಪರಿಹಾರ ಸಿಗುತ್ತದೆ.
ಜ್ವರ:
ಶುಂಠಿ ಕಷಾಯ ಮಾಡಿ ಸೇವಿಸಿದರೆ ಜ್ವರ ಕಡಿಮೆ ಆಗುತ್ತದರ. ಶುಂಠಿ ಕಷಾಯ ಮಾಡುವುದು ಹೇಗೆ? ಶುಂಠಿ, ತುಳಸಿ, ಕುತುಂಬರಿ, ಮೆಂತೆ ಸೇರಿಸಿ ಚೆನ್ನಾಗಿ ಕುದಿಸ ಬೇಕು, ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿದರೆ ಜ್ವರ ನಿವಾರಣೆಯಾಗುತ್ತದೆ.
ಇನ್ನೂ ಅನೇಕ ರೋಗಗಳಿಗೆ ಶುಂಠಿಯಿಂದ ಪರಿಹಾರವಿದೆ. ಅಗತ್ಯವಿದ್ದಾಗ ಶುಂಠಿ ಉಪಯೋಗಿಸಿ.