Friday, July 1, 2022

Latest Posts

‘ಚಂದನವನ’ ದಲ್ಲಿ ಗಿಡಗಳ ಆರೈಕೆ: ಸ್ವಚ್ಛತಾ ಕಾರ್ಯ ಹಮ್ಮಿಕೊಂಡ ಪರೋಪಕಾರಂ

ಹೊಸದಿಗಂತ ವರದಿ, ಶಿವಮೊಗ್ಗ:

ನಗರದ ಪರೋಪಕಾರಂ ತಂಡದ ವತಿಯಿಂದ ಆಲ್ಕೊಳ ವೃತ್ತದ ಬಳಿಯಿರುವ ಅರಣ್ಯ ಇಲಾಖೆ ಚಂದನ ವಿಶ್ರಾಂತಿ ಗೃಹ ಆವರಣದಲ್ಲಿ ವಿಶೇಷ ಹಾಗೂ ಅಪೂರ್ವ ಔಷಧೀಯ ಗಿಡಗಳ ‘ಚಂದನವನ’ ದಲ್ಲಿ ಗಿಡಗಳ ಆರೈಕೆ ಹಾಗೂ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ಇದು ಪರೋಪಕಾರಂ ತಂಡದ 422 ನೇ ಸೇವಾ ಕಾರ್ಯಕ್ರಮವಾಗಿತ್ತು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಅರಣ್ಯ ಇಲಾಖೆ ಡಿಸಿಎಫ್ ಶಂಕರ್ ಯು.ಎ, ಎಸಿಎಫ್ ಪುಟ್ನಳ್ಳಿ , ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿ ತಂಡಕ್ಕೆ ಸ್ಪೂರ್ತಿ ತುಂಬಿದರು. ಪರಿಸರ ರಾಜ್ಯ ಪ್ರಶಸ್ತಿ ವಿಜೇತ ವೆಂಕಟಗಿರಿ ಔಷಧೀಯ ಗಿಡಗಳ ಪರಿಚಯ ಹಾಗೂ ಮಾಹಿತಿ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss