ಚಂದನ ವನದ ಕ್ಯೂಟ್ ತಾರೆ ನಟಿ ಅಮೂಲ್ಯ ರಿವೀಲ್ ಮಾಡಿದ್ರು ಸೀಮಂತದ ಫೋಟೋ!!

0
249

ಬೆಂಗಳೂರು: ಚಂದನ ವನದ ಕ್ಯೂಟ್ ತಾರೆ ಅಮೂಲ್ಯ ಸೀಮಂತದ ಫೋಟೋ ವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವ ಮುಖಾಂತರ ಸುದ್ದಿಯಲ್ಲಿದ್ದಾರೆ. ಆದರೆ ಇದೇನು ಅವಸರದಲ್ಲಿ ಸೀಮಂತ ಕಾರ್ಯಕ್ರಮವೇ ಅಂತ ಆಶ್ಚರ್ಯ ಪಡಬೇಡಿ. ಅಮೂಲ್ಯ ಸೀಮಂತ ನಡೆಸಿದ್ದು ಬಡ ಗರ್ಭಿಣಿ ಸ್ತ್ರೀಯರಿಗೆ. ಕೊರೋನಾ ಲಾಕ್ ಡೌನ್ ಆದಾಗಿನಿಂದ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಸುದ್ದಿಯಾಗುತ್ತಿದ್ದ ಅಮೂಲ್ಯ ಇದೀಗ ರಾಜರಾಜೇಶ್ವರಿ ನಗರದ ಸರ್ಕಾರಿ ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿಸಿ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಇವರ ಕಾರ್ಯಕ್ಕೆ ಪತಿ ಜಗದೀಶ್ ಹಾಗೂ ಅತ್ತೆ ಮಾವನೂ ಸಹಕರಿಸಿದ್ದು ಅಮೂಲ್ಯಗೆ ಜನರ ಮೆಚ್ಚುಗೆ ಯ ಸುರಿಮಳೆ ಬರುತ್ತಿದೆ. ಅಮೂಲ್ಯ ಈ ಹಿಂದೆ ಪ್ರಾಣಿಗಳಿಗೆ ಆಹಾರ,ಬಡವರಿಗೆ ಕಿಟ್,ಮಾಸ್ಕ್ ವಿತರಣೆ ಮಾಡುವ ಮೂಲಕ ಕೊರೋನಾ ಕಾಳಜಿ ಮೆರೆಯುತ್ತಿದ್ದಾರೆ. ವಿವಾಹದ ಬಳಿಕ ಚಿತ್ರರಂಗದಿಂದ ದೂರ ಉಳಿದ ಅಮೂಲ್ಯ ಆನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅಮೂಲ್ಯ ಅವರ ಮಾವ ಜಿ.ಎಚ್.ರಾಮಚಂದ್ರ ಅವರು ರಾಜಕಾರಣಿ ಯಾಗಿದ್ದಾರೆ.

LEAVE A REPLY

Please enter your comment!
Please enter your name here