ಹೊಸದಿಗಂತ ವರದಿ,ಕಲಬುರಗಿ:
ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದಲ್ಲಿ ಈಜಾಡಲು ತೆರಳಿದ್ದ ಹೈದರಾಬಾದ್ನ ಸಯ್ಯದ್ ಅಹ್ಮದ್ (17) ಎಂಬ ಯುವಕ ಕಣ್ಮರೆಯಾಗೀದ್ದನು, ಶುಕ್ರವಾರ ಬೆಳಿಗ್ಗೆ ಶವವಾಗಿ ಬೆಳಕಿಗೆ ಬಂದ ಸುದ್ದಿ ವರದಿಯಾಗಿದೆ.
8 ಜನರು ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಹೈದರಾಬಾದ್ನಿಂದ ಬಂದಿದ್ದರು. ಜಲಾಶಯ ವೀಕ್ಷಿಸಲು ಸಂಜೆ 5ಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಈಜಾಡಲು ಜಲಾಶಯಕ್ಕೆ ಇಳಿದಿದ್ದ ಮೂವರ ಪೈಕಿ ಇಬ್ಬರು ಈಜಿಕೊಂಡು ದಡ ಸೇರಿದ್ದು, ಸಯ್ಯದ್ ಅಹ್ಮದ್ ನೀರಿನಲ್ಲಿ ಕಣ್ಮರೆಯಾಗಿದ್ದಾನೆ.
ನಂತರ ಅಗ್ನಿ ಶಾಮಕ ದಳದಿಂದ ನಿರಂತರವಾಗಿ ಶೋಧ ಕಾರ್ಯ ಮುಂದುವರೆದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮೃತ ವ್ಯಕ್ತಿ ಯ ದೇಹ ಪತ್ತೆಯಾಗಿದೆ. ಅಗ್ನಿ ಶಾಮಕ ಠಾಣೆಯ ಅಧಿಕಾರಿ ಸೂರ್ಯಕಾಂತ ಬಿರಾದಾರ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿತ್ತು.