ಪ್ಯಾರಿಸ್: ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಭಾಗದ ಗೋಳಾರ್ಧದಲ್ಲಿ ನೀರಿನಂಶ ಇರುವುದನ್ನು ಪತ್ತೆ ಮಾಡಿದ್ದಾರೆ.
ಸೋಫಿಯಾ ಟೆಲಿಸ್ಕೋಪ್ ಮೂಲಕ, ಚಂದ್ರನ ಮೇಲ್ಮೈಯಲ್ಲಿ ಸೂರ್ಯನ ಕಿರಣಗಳು ಬೀಳುವ ಪ್ರದೇಶದಲ್ಲಿ ನೀರಿನ ಕುರುಹು ಪತ್ತೆಯಾಗಿದೆ ಎಂದು ನಾಸಾ ತಿಳಿಸಿದೆ. ಈ ಕುರಿತು ನಿನ್ನೆ ನೇಚರ್ ಅಸ್ಟ್ರಾನಮಿಯಲ್ಲಿ ಎರಡು ಸಂಶೋಧನಾ ಲೇಖನಗಳು ಪ್ರಕಟವಾಗಿವೆ.
ಪ್ರಾರಂಭದ ಅಧ್ಯಯನಗಳು ಶೇ 20ರಷ್ಟು ನೀರು ಚಂದ್ರನಲ್ಲಿ ಲಭ್ಯವಿದೆ ಎಂದು ಹೇಳಿದ್ದವು. ಕೊಲರ್ಡೊ ಪಾಲ್ ಹೆಯ್ನ್ ವಿಶ್ವವಿದ್ಯಾಲಯದ ತಂಡದ ಅಧ್ಯಯನದ ಪ್ರಕಾರ ಚಂದ್ರನಲ್ಲಿ ಹಿಮದ ರೂಪದಲ್ಲಿ 40 ಸಾವಿರ ಚದರ ಕಿ.ಮೀ ವ್ಯಾಪ್ತಿಗಿಂತಲೂ ಹೆಚ್ಚಿನ ಭಾಗದಲ್ಲಿ ನೀರು ಇದೆ.
ಚಂದ್ರನ ಕೆಲವು ಸ್ಥಳಗಳಲ್ಲಿ ನೀರು ಹೇರಳವಾಗಿದೆ ಎಂದಿರುವ ಮೇರಿಲ್ಯಾಂಡ್ನ ನಾಸಾದ ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದ ಕೇಸಿ ಹೊನ್ನಿಬಾಲ್, ಚಂದ್ರನ ಮೇಲಿರುವ ನೀರು ಕುಡಿಯಲು ಬಳಸಬಹುದಾಗಿದೆ, ಇದನ್ನು ಉಸಿರಾಡುವ ಆಮ್ಲಜನಕ ಮತ್ತು ರಾಕೆಟ್ ಇಂಧನವಾಗಿಯೂ ಬಳಸಬಹುದು ಎಂದು ತಿಳಿಸಿದ್ದಾರೆ.
ಚಂದ್ರನ ಅನೇಕ ಭಾಗಗಳಲ್ಲಿ ನೆರಳು ಕವಿದಿರುವ ಜಾಗಗಳು, ಸಣ್ಣ ಬಾವಿಗಳು ಹಾಗೂ ಕುಳಿಗಳಲ್ಲಿ ಶೀಥಲೀಕರಣಗೊಂಡ ನೀರು ಇದ್ದು, ಸೂರ್ಯನ ಬಿಸಿಲು ಬೀಳುವ ಮೇಲ್ಮೈನಲ್ಲಿ ಈ ಮುಂಚೆ ಲೆಕ್ಕಾಚಾರ ಹಾಕಿರುವುದಕ್ಕಿಂತಲೂ ಹೆಚ್ಚು ನೀರು ಅಸ್ತಿತ್ವದಲ್ಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಹಿಂದಿನ ಸಂಶೋಧನೆ ಚಂದ್ರನ ಮೇಲ್ಮೈ ಸ್ಕ್ಯಾನ್ ಮಾಡುವ ಮೂಲಕ ನೀರಿನ ಕುರುಹುಗಳನ್ನು ಕಂಡುಹಿಡಿದಿತ್ತು. ಆದರೆ, ನೀರು ಮತ್ತು ಹೈಡ್ರಾಕ್ಸಿಲ್ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ, ಹೊಸ ಅಧ್ಯಯನ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶಗಳಲ್ಲಿಯೂ ನೀರಿದೆ ಎಂಬುದಕ್ಕೆ ಮತ್ತಷ್ಟು ಸಾಕ್ಷಿಗಳನ್ನು ಒದಗಿಸುತ್ತದೆ.
ಭವಿಷ್ಯದಲ್ಲಿ ಬಾಹ್ಯಾಕಾಶಯಾನಿಗಳು ಚಂದ್ರನ ಮೇಲೆ ನೀರು ಅಥವಾ ಇಂಧನವನ್ನು ಪಡೆಯಬಹುದು ಎಂದು ನಾಸಾ ತಿಳಿಸಿದೆ.
ಈ ಹಿಂದೆ ನಡೆದ ಸಂಶೋಧನೆಗಳಲ್ಲಿ ಚಂದ್ರನ ಮೇಲ್ಮೈ ಸ್ಕ್ಯಾನ್ ಮಾಡುವ ಮೂಲಕ, ನೀರಿನ ಕುರುಹನ್ನ ಪತ್ತೆ ಮಾಡಲಾಗಿತ್ತು. ಆದ್ರೆ ಇದ್ರಲ್ಲಿ ನೀರು(H2O) ಮತ್ತು ಒಂದು ಹೈಡ್ರೋಜನ್ ಅಣು ಹಾಗೂ ಒಂದು ಆಕ್ಸಿಜನ್ ಅಣುವಿನಿಂದ ಕೂಡಿದ ಹೈಡ್ರಾಕ್ಸಿಲ್ ನಡುವೆ ವ್ಯತ್ಯಾಸ ಗುರುತಿಸಲು ಸಾಧ್ಯವಾಗಿರಲಿಲ್ಲ. ಆದ್ರೆ ಹೊಸದಾಗಿ ನಡೆಸಿರೋ ಅಧ್ಯಯನದಲ್ಲಿ, ಚಂದ್ರನ ಮೇಲೆ, ಸೂರ್ಯನ ರಶ್ಮಿ ಬೀಳುವ ಪ್ರದೇಶಗಳಲ್ಲೂ ನೀರು ಇದೆ ಅನ್ನೋದಕ್ಕೆ ಕೆಮಿಕಲ್ ಪ್ರೂಫ್ ಕೂಡ ಇದೆ.
ಈವರೆಗೆ ನಡೆಸಲಾದ ಸಂಶೋಧನೆ ಪ್ರಕಾರ ಚಂದ್ರನ ಶೀತ ಮತ್ತು ನೆರಳಿರುವ ಮೇಲ್ಮೈಗಳಲ್ಲಿ ಮಾತ್ರ H2O ಕಂಡುಬಂದಿತ್ತು. ಉಳಿದ ಮೇಲ್ಮೈನಲ್ಲಿ ನೀರಿಗೆ ಸಂಬಂಧಿಸಿದ ರಾಸಾಯನಿಕ ವಸ್ತುಗಳಾದ ಹೈಡ್ರಾಕ್ಸಿನ್ (ಒಎಚ್) ಇರಬಹುದಾದ ಸಾಧ್ಯತೆ ಇತ್ತು. ಈಗ ನಾಸಾ ವಿಜ್ಞಾನಿಗಳ ಸಂಶೋಧನೆಯಿಂದ ಚಂದಿರನ ದಕ್ಷಣ ಗೋಳಾರ್ಧದಲ್ಲಿ ನೀರು ಇರುವುದು ಪತ್ತೆಯಾಗಿದೆ. ಇದು ಮತ್ತಷ್ಟು ಹೊಸ ಸಂಶೋಧನೆಗೆ ಅನುವು ಮಾಡಿಕೊಟ್ಟಿದೆ.