Tuesday, August 16, 2022

Latest Posts

ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿಗಳಿಂದ ಕಾವೇರಿಗೆ ಬಾಗೀನ ಅರ್ಪಣೆ

ಶ್ರೀರಂಗಪಟ್ಟಣ : ತಾಲೂಕಿನ ಡಿ.ಎಂ.ಎಸ್. ಚಂದ್ರವನ ಆಶ್ರಮದ ಪೀಠಾಧಿಪತಿ ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಂಗಳವಾರ ಕೆ.ಆರ್.ಎಸ್.ಗೆ ತೆರಳಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅವರು, ಪ್ರತೀ ವರ್ಷದಂತೆ ಈ ಬಾರಿಯೂ ಕಾವೇರಿ ಮಾತೆಗೆ ಭಕ್ತಿಪೂರ್ವಕವಾಗಿ ನಾಡಿಗೆ ಮತ್ತು ನಾಡಿನ ಜನತೆಗೆ ಶುಭವಾಗಲೆಂದು ಹಾಗೂ ವಿಶೇಷವಾಗಿ ಈಗ ಜಗದಾದ್ಯಂತ ಪಸರಿಸಿರುವ ಕೊರೊನವನ್ನು ಹೋಗಲಾಡಿಸಲೆಂದು ಪ್ರಾರ್ಥಿಸಿ ಬಾಗಿನವನ್ನು ಸಮರ್ಪಿಸಿದ್ದೇವೆ ಎಂದರು.
ಲಿಂಗೈಕ್ಯ ಹಿರಿಯ ಶತಾಯುಷಿಗಳಾದ ಶ್ರೀ ಮರಿದೇವರು ಶಿವಯೋಗಿ ಮಹಾಸ್ವಾಮಿಗಳವರಿಂದ ಪ್ರಾರಂಭವಾದ ಕಾವೇರಿ ಮಾತೆಗೆ ಬಾಗಿನ ಬಿಡುವ ಕಾರ್ಯವನ್ನು ಇಂದಿಗೂ ಸಂಪ್ರದಾಯಬದ್ಧವಾಗಿ ಮುಂದುವರಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.
ಅತಿವೃಷ್ಟಿ ಮತ್ತು ಅನಾವೃಷ್ಟಿಗಳಿಂದ ಏನೂ ತೊಂದರೆಯಾಗದೇ ನಮ್ಮ ರೈತಾಪಿ ಜನಕ್ಕೆ ಮತ್ತು ಕನ್ನಡ ನಾಡಿನ ಜನಕ್ಕೆ ಸಮೃದ್ಧಿಯಾಗಲಿ ಎಂದು ಶುಭ ಕೋರಿದ ಅವರು, ಪ್ರತಿವರ್ಷ ಕಾವೇರಿ ಮಾತೆಗೆ ಬಾಗಿನ ಬಿಟ್ಟು ಪ್ರಾರ್ಥಿಸಿದ್ದೇವೆ. ರಾಷ್ಟ್ರ ಮತ್ತು ರಾಜ್ಯ ಸಮೃದ್ಧಿಯಾಗಿದ್ದರೆ ಮಾತ್ರ ಜನ ಸಮೃದ್ಧಿಯಾಗಿರುತ್ತಾರೆ. ಅತಿವೃಷ್ಟಿಯಾಗಿ ಹಲವಾರು ಕಡೆ ಸಂಕಷ್ಟದಲ್ಲಿರುವ ರೈತರ ಕಷ್ಟಗಳು ನಿವಾರಣೆಯಾಗಲೆಂದು ಆ ಕಾವೇರಿ ಮಾತೆ ಮತ್ತು ಭಗವಂತನಲ್ಲಿ ಬೇಡಿಕೊಂಡಿದ್ದೇವೆ. ಕಾವೇರಿ ಮಾತೆ ಸದಾ ತುಂಬಿ ಹರಿಯಲಿ, ಅತಿವೃಷ್ಟಿ ಆಗದಿರಲಿ, ರೈತಾಪಿ ಜನರ ಕಣಜ ಸಮೃದ್ಧಿಯಾಗಿ ತುಂಬಲಿ ಎಂದು ಶುಭ ಕೋರಿದರು.
ಉದ್ಯಮಿಗಳಾದ ಶ್ರೀಶೈಲರಾಮಣ್ಣವರ್ ಮತ್ತು ಬಸವರಾಜು. ಎ.ಎಂ, ವೀರಶೈವ ತಾಲ್ಲೂಕು ಘಟಕದ ಅಧ್ಯಕ್ಷ ನಿರಂಜನಬಾಬು, ಆಶ್ರಮದ ಕಾರ್ಯದರ್ಶಿ ಟಿ.ಪಿ. ಶಿವಕುಮಾರ್ ಮತ್ತು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss