ಹೊಸ ದಿಗಂತ ವರದಿ, ಶಿವಮೊಗ್ಗ:
ಚಲಿಸುತ್ತಿದ್ದ ರೈಲಿನಿಂದ ನಗರದ ಹೊಸ ಸೇತುವೆ ಬಳಿ ತುಂಗಾನದಿಗೆ ಬಿದ್ದಿದ್ದ ಯುವತಿಯ ಮೃತದೇಹ ಪತ್ತೆಯಾಗಿದೆ.
ಮೂರು ದಿನಗಳ ಹಿಂದೆ ಬೆಂಗಳೂರಿನಿಂದ ಜನಶತಾಬ್ಧಿ ರೈಲಿನಲ್ಲಿ ಬರುತ್ತಿದ್ದಾಗ ಬೋಗಿ ಬಾಗಿಲ ಬಳಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ವೇಳೆ ಸಹನಾ(24) ಎಂಬ ಯುವತಿ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳೀಯರ ನೆರವಿನಿಂದ ಎರಡು ದಿನಗಳ ಕಾಲ ಸತತ ಹುಡುಕಾಟ ನಡೆಸಿದ್ದರು.
ಶನಿವಾರ ಬೆಳಿಗ್ಗೆ ತುಂಗಾನದಿಯಲ್ಲಿ ಸಹನಾಳ ವುೃತದೇಹ ಪತ್ತೆಯಾಗಿದೆ. ಗಾಡಿಕೊಪ್ಪದ ಸಹನಾ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಶಿವಮೊಗ್ಗದಲ್ಲಿನ ಮನೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.