ಉಪ್ಪಿನಕಾಯಿ ತಯಾರು ಮಾಡೋಕೆ ಎಷ್ಟೊಂದು ಶ್ರಮದ ಅಗತ್ಯ ಇದೆ ಅಲ್ಲವಾ? ನೆನಸಬೇಕು, ಬಿಸಿಲಿಗಿಡಬೇಕು ಹಾಗೆ ಕೆಡದಂತೆ ನೋಡಿಕೊಳ್ಳಬೇಕು. ಆದರೆ ತಕ್ಷಣಕ್ಕೆ ಮಾಡಿ ತಿನ್ನುವ ಉಪ್ಪಿನಕಾಯಿ ಎಷ್ಟು ಸುಲಭ ಗೊತ್ತೇ? ಹೆಚ್ಚು ಸಾಮಾಗ್ರಿಗಳು ಇದಕ್ಕೆ ಬೇಕಿಲ್ಲ.. ಹೇಗೆ ಮಾಡೋದು ಅಂತೀರಾ ನೋಡಿ..
ಬೇಕಾಗಿರುವ ಸಾಮಾಗ್ರಿಗಳು
- ಮಾವಿನಕಾಯಿ/ಲಿಂಬೆಕಾಯಿ/ಕ್ಯಾರೆಟ್
- ಉಪ್ಪು
- ಸಾಸಿವೆ
- ಇಂಗು
- ಖಾರದಪುಡಿ
- ಅರಿಶಿಣ
ಮಾಡುವ ವಿಧಾನ - ಮೊದಲಿಗೆ ಮಾವಿನಕಾಯಿ ಹೆಚ್ಚಿಕೊಳ್ಳಿ
- ನಂತರ ಇದಕ್ಕೆ ಉಪ್ಪು ಅರಿಶಿಣ ಖಾರದಪುಡಿ ಹಾಕಿ ಮಿಕ್ಸ್ ಮಾಡಿ
- ನಂತರ ಬಾಣಲೆಗೆ ಎಣ್ಣೆ ಹಾಕಿ ಸ್ವಲ್ಪ ಸಾಸಿವೆ ಇಂಗು ಹಾಕಿ ಒಗ್ಗರಣೆ ಮಾಡಿ
- ನಂತರ ಕರಿಬೇವು ಹಾಕಿ ಈ ಎಣ್ಣೆಯನ್ನು ಮಿಕ್ಸ್ ಮಾಡಿದ ಮಾವಿನಕಾಯಿ ಮೇಲೆ ಹಾಕಿ ಸ್ವಲ್ಪ ಸಮಯ ಬಿಟ್ಟು ತಿನ್ನಬಹುದು.