Monday, July 4, 2022

Latest Posts

ಚಳಿಗಾಲದ ವಾತಾವರಣಕ್ಕೆ ತಲೆ ಹಿಡಿದಂತಾಗಿದೆಯಾ? ಕೆಲವೇ ಸಮಯದಲ್ಲಿ ತಲೆನೋವು ಹೋಗಿಸಲು ಹೀಗೆ ಮಾಡಿ..

ಚಳಿಗಾಲದ ಥಂಡಿಗೆ ತಲೆನೋವು ಮಾಮೂಲಿ. ಈಗ ಚಳಿ, ಮಳೆ ಎಲ್ಲವೂ ಇದ್ದು, ವಾತಾವರಣಕ್ಕೆ ತಲೆನೋವು ಬರುತ್ತದೆ. ಥಂಡಿ ಹಿಡಿದಂತಾಗುತ್ತದೆ. ಇದು ತಲೆ ಭಾರ ಮಾಡುತ್ತದೆ. ಇಂಥ ತಲೆನೋವು ಹೋಗಿಸುವುದು ಹೇಗೆ? ಕೆಲವೇ ಸಮಯದಲ್ಲಿ ತಲೆನೋವು ಹೋಗಿಸಲು ಹೀಗೆ ಮಾಡಿ..

  • ಚೆನ್ನಾಗಿ ನೀರು ಕುಡಿಯಿರಿ: ದೇಹದಲ್ಲಿ ಎಲ್ಲಿಯವರೆಗೂ ಹೆಚ್ಚು ನೀರು ಇರುತ್ತದೆಯೋ ಅಲ್ಲಿಯವರೆಗೂ ಯಾವ ಸಮಸ್ಯೆಯೂ ಇರುವುದಿಲ್ಲ. ದೇಹ ಹೈಡ್ರೇಟ್ ಆಗಿರದ ಕಾರಣ ತಲೆನೋವು ಬರುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯಿರಿ.
  • ಕುಡಿತ ನಿಲ್ಲಿಸಿ: ಚಳಿಗಾಲ, ದೇಹ ಬೆಚ್ಚಗಿರಲು ತುಂಬಾ ಜನ ಕುಡಿಯುತ್ತಾರೆ. ಆದರೆ ಇದರಿಂದ ತಲೆನೋವು, ಥಂಡಿ ಹಿಡಿದಂತಾಗುತ್ತದೆ. ಮೈಗ್ರೇನ್ ಇರುವವರಿಗೂ ತಲೆನೋವು ಬರುತ್ತದೆ. ಕೆಲವರಿಗೆ ಬೆಳಗಿನ ಹ್ಯಾಂಗ್ ಓವರ್‌ನಲ್ಲಿಯೇ ತಿಳಿದುಬಿಡುತ್ತದೆ. ತಲೆ ಹಿಡಿದಂತಾಗುವುದು ಮಾಮೂಲು. ಅದಕ್ಕಾಗಿ ಕುಡಿತ ನಿಲ್ಲಿದುವುದು ಒಳ್ಳೆಯದು.
  • ಚೆನ್ನಾಗಿ ನಿದ್ದೆ ಮಾಡಿ: ಚಳಿಗಾಲದಲ್ಲಿ ಚೆನ್ನಾಗಿ ನಿದ್ದೆ ಬರುತ್ತದೆ. ಇಂತದರಲ್ಲೂ ನೀವು ನಿದ್ದೆ ಮಾಡುತ್ತಿಲ್ಲ ಎಂದರೆ ತಲೆನೋವು ಗ್ಯಾರೆಂಟಿ. ನಿದ್ದೆಗೆ ಯಾವುದೇ ತೊಂದರೆ ಮಾಡಿಕೊಳ್ಳದೆ ಮಲಗಿ.
  • ಸ್ಟ್ರಾಂಗ್ ಸ್ಮೆಲ್ ಅವಾಯ್ಡ್ ಮಾಡಿ: ಕೆಲವರಿಗೆ ಕೆಲವು ವಾಸನೆಯಿಂದ ತಲೆನೋವು ಬರುತ್ತದೆ. ಇಂಥ ವಾಸನೆಯಿಂದ ದೂರ ಇರಿ. ಪರ್ಫ್ಯೂಮ್, ಕೆಮಿಕಲ್,ಪೆಟ್ರೋಲ್ ಹೀಗೆ ಒಬ್ಬೊಬ್ಬರಿಗೆ ಒಂದೊಂದು ವಾಸನೆ ಹಿಡಿಸುವುದಿಲ್ಲ. ಹಾಗಾಗಿ ವಾಸನೆ ಅವಾಯ್ಡ್ ಮಾಡಿ.
  • ಜಿಂಜರ್ ಟೀ: ಜಿಂಜರ್, ಬೆಲ್ಲ ಹಾಗೂ ನೀರು ಹಾಖಿ ಕುದಿಸಿ ಟೀ ಮಾಡಿ ಕುಡಿಯಿರಿ. ಇದರಿಂದ ಒಳ್ಳೆಯ ನಿದ್ದೆ ನಿಮದಾಗುತ್ತದೆ. ಜೊತೆಗೆ ಶೀತ ಥಂಡಿ ಕೂಡ ಬರುವುದಿಲ್ಲ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss